ಮುಂಬೈ: 'ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಳ್ಳುವ ನಕಲಿ ಸುದ್ದಿಗಳ ವಿರುದ್ಧ ಕ್ರಮಕೈಗೊಳ್ಳಲಿಕ್ಕಾಗಿ, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗೆ ಕೇಂದ್ರ ಈಚೆಗೆ ತಿದ್ದುಪಡಿ ಮೂಲಕ ಜಾರಿಗೊಳಿಸಿದ ನಿಯಮಾವಳಿಗಳು ವಿಪರೀತ ಎನಿಸುತ್ತಿವೆ' ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಹೇಳಿದೆ.

'ನಕಲಿ, ಸುಳ್ಳು, ದಾರಿ ತಪ್ಪಿಸುವ ವಿಷಯ ಯಾವುದು? ಎಂಬುದನ್ನು ನಿರ್ಧರಿಸಲು ಸರ್ಕಾರದ ಪ್ರಾಧಿಕಾರವೊಂದಕ್ಕೆ ಸಂಪೂರ್ಣ ಅಧಿಕಾರ ಕೊಡುವುದು ಕಷ್ಟವಿದೆ. ಈ ತಿದ್ದುಪಡಿಯ ಹಿಂದಿನ ಅವಶ್ಯಕತೆಯನ್ನು ಇನ್ನೂ ಅರ್ಥ ಮಾಡಿಕೊಳ್ಳಲಾಗಿಲ್ಲ' ಎಂದು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.
'ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸರ್ಕಾರವು ಸಹ ನಾಗರಿಕರಷ್ಟೇ ಸಹಭಾಗಿಯಾಗಿದೆ. ಪ್ರಶ್ನಿಸುವುದು ಮತ್ತು ಉತ್ತರಕ್ಕೆ ಆಗ್ರಹಿಸುವುದು ಜನರ ಮೂಲ ಹಕ್ಕು. ಇದಕ್ಕೆ ಸ್ಪಂದಿಸುವುದು ಸರ್ಕಾರದ ಕರ್ತವ್ಯವಾಗಿದೆ' ಎಂದಿದೆ.
'ತಿದ್ದುಪಡಿಗೊಂಡ ಐಟಿ ನಿಯಮಗಳು ಅನಿಯಂತ್ರಿತ ಮತ್ತು ಅಸಂವಿಧಾನಿಕ. ಇವು ನಾಗರಿಕರ ಮೂಲ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತವೆ' ಎಂದು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮರಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ ಅಸೋಸಿಯೇಷನ್ ಆಫ್ ಇಂಡಿಯನ್ ಮ್ಯಾಗಜಿನ್ಸ್ ಅರ್ಜಿ ಸಲ್ಲಿಸಿದ್ದವು. ಈ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸುತ್ತಿದೆ.
'ಸತ್ಯಶೋಧನಾ ಘಟಕವನ್ನು (ಎಫ್‌ಸಿಯು) ತಿದ್ದುಪಡಿಗೊಂಡ ನಿಯಮಗಳಡಿ ಯಾರು ಸ್ಥಾಪಿಸಬೇಕು? ಈ ಘಟಕ ನಿರಾಕರಿಸಲಾಗದ ಸತ್ಯವನ್ನೇ ಹೇಳುತ್ತದೆ ಎಂದು ಹೇಗೆ ಊಹಿಸುತ್ತೀರಿ' ಎಂದು ನ್ಯಾಯಮೂರ್ತಿ ಪಟೇಲ್ ಪ್ರಶ್ನಿಸಿದರು.