ಕುಂಬಳೆ: ಇಚ್ಲಂಗೋಡು ಎ.ಎಲ್.ಪಿ ಶಾಲೆಯಲ್ಲಿ 2023-24 ಶೈಕ್ಷಣಿಕ ವರ್ಷದ ಪಿ.ಟಿ.ಎ ಮಹಾಸಭೆ ಜರಗಿತು. ಶಾಲಾ ಆಡಳಿತ ಸಮಿತಿ ಅಧ್ಯಕÀ ದಿವಾಕರ ಆಳ್ವ ಅವರು ದೀಪ ಬೆಳಗಿಸಿ ಸಭೆ ಉದ್ಘಾಟಿಸಿದರು. ಹರೀಶ ಮಲೆಂದೂರು ಅಧ್ಯಕ್ಷತೆ ವಹಿಸಿದ್ದರು. ಎಸ್ ಎಸ್ ಜಿ ಅಧ್ಯಕ್ಷ ಮೌನೇಶ ಆಚಾರ್ಯ, ಮಾತೃಮಂಡಳಿ ಅಧ್ಯಕ್ಷೆ ಅಮಿತ ಶುಭಾಶಂಸನೆಗೈದರು. 2023-24ರ ನೂತನ ಪಿ.ಟಿ.ಎ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪಿಟಿಎ ಅಧ್ಯಕ್ಷರಾಗಿ ಕೃಷ್ಣ ಪ್ರಸಾದ್ ಮಯ್ಯ ಹಾಗೂ ಮಾತೃ ಮಂಡಳಿ ಅಧ್ಯಕ್ಷೆಯಾಗಿ ಯಶೋದ ಅವರನ್ನು ಆಯ್ಕೆ ಮಾಡಲಾಯಿತು. ಶಾಲಾ ಹಿರಿಯ ಅಧ್ಯಾಪಿಕೆ ಭಾರತಿ ಟೀಚರ್ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ಜಯರಾಮ ವಂದಿಸಿದರು.