ತಿರುವನಂತಪುರಂ: ಭಾರತೀಯ ಸೇನೆಯನ್ನು ಅವಮಾನಿಸುತ್ತಿರುವ ಮಲೆಯಾಳಂ ರಿಪೋರ್ಟರ್ ಟಿ.ವಿ. ಸಂಪಾದಕ ಡಾ.ಅರುಣ್ ಕುಮಾರ್ ವಿರುದ್ದ ವ್ಯಾಪಕ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿದೆ.
ಮಣಿಪುರದಲ್ಲಿ ಸೈನಿಕರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಅರುಣ್ ಪ್ರಸ್ತಾಪಿಸಿದ್ದರು. ಶನಿವಾರ ವಾಹಿನಿಯಲ್ಲಿ ಪ್ರಸಾರವಾದ ಮೀಟ್ ದಿ ಎಡಿಟರ್ಸ್ ಕಾರ್ಯಕ್ರಮದಲ್ಲಿ ಅರುಣ್ ಸೇನೆಯನ್ನು ಅವಮಾನಿಸಿದ್ದಾರೆ ಎಂಬ ಆಧಾರ ರಹಿತ ಆರೋಪ ಮಾಡಿದ್ದರು.
ಮಣಿಪುರದಲ್ಲಿ ಇತರ ಸಮುದಾಯದ ಪುರುಷರನ್ನು ಇಷ್ಟು ಕ್ರೂರವಾಗಿ ಅವಮಾನಿಸಿದ ಇತಿಹಾಸವೇ ಇರಲಿಲ್ಲ. ಆದರೆ ಸೇನೆಯ ಕಡೆಯಿಂದಲೂ ಮಹಿಳೆಯರ ಮೇಲಿನ ದೌರ್ಜನ್ಯ ನಡೆದಿದೆ. ಈ ಹಿಂದೆ ಮಿಲಿಟರಿ ಆಳ್ವಿಕೆಯಲ್ಲಿ ಚಿತ್ರಹಿಂಸೆ ನಡೆದಿತ್ತು. ಮಣಿಪುರದಲ್ಲಿ ನರಮೇಧದ ಹೆಸರಿನಲ್ಲಿ ಗಲಭೆಗಳು ನಡೆದಿವೆ. ಇದು ನಿರಂತರತೆ. ಮಹಿಳೆಯರ ಮೇಲೆ ಹಿಂಸೆಯನ್ನು ಅಂದು ಸೇನೆ ಮಾಡುತ್ತಿತ್ತು, ಆದರೆ ಇಂದು ಇತರೆ ಸಮುದಾಯದ ಪುರುಷರು ಮಾಡುತ್ತಿದ್ದಾರೆ ಎಂಬುದು ಚರ್ಚೆಯಲ್ಲಿ ಅರುಣ್ ಅವರ ಉದ್ಘೋಷವಾಗಿತ್ತು.
ಚರ್ಚೆಯಲ್ಲಿ, ಸೇನಾ ಅಧಿಕಾರದ ಸೋಗಿನಲ್ಲಿ ಸೇನೆಯು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ ಎಂದು ಅರುಣ್ ಸ್ಥಾಪಿಸಲು ಪ್ರಯತ್ನಿಸಿದರು. ವಾಹಿನಿಯ ಸಂಪಾದಕೀಯ ಮಂಡಳಿಯ ಎಲ್ಲ ಸದಸ್ಯರ ನೇತೃತ್ವದಲ್ಲಿ ನಡೆದ ಚರ್ಚೆಯಲ್ಲಿ ಅರುಣ್ ಅವರ ಆಧಾರ ರಹಿತ ಆರೋಪ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ..