ತಿರುವನಂತಪುರಂ: ಭಾರೀ ಮಳೆಯಿಂದಾಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಬೇಕಾದರೆ ಹಿಂದಿನ ದಿನವೇ ರಜೆ ಘೋಷಸಬೇಕು ಎಂದು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಹೇಳಿರುವÀರು. ರಜೆ ಘೋಷಣೆ ವಿಳಂಬದಿಂದ ಮಕ್ಕಳು ಮತ್ತು ಪೋಷಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಚಿವರ ಈ ಸೂಚನೆ ಬಂದಿದೆ.
ಭಾರೀ ಮಳೆ, ತುರ್ತು ಸಂದರ್ಭಗಳಲ್ಲಿ ರಜೆ ನೀಡಲು ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಮಳೆ ಬಂದರೆ ಹಿಂದಿನ ದಿನವೇ ರಜೆ ಘೋಷಿಸುವ ನೀತಿ ಅಳವಡಿಸಿಕೊಳ್ಳಬೇಕು. ಅಂದು ರಜೆ ಘೋಷಿಸಿದರೆ ಮಕ್ಕಳು ಮನೆಯಿಂದ ಹೊರ ಬರುವಂತಾಗಿದೆ. ಅನೇಕ ಅನಾನುಕೂಲತೆಗಳು ಬರುವ ಸಾಧ್ಯತೆಯಿದೆ. ರಜೆ ಕೊಟ್ಟರೆ ಹಿಂದಿನ ದಿನವೇ ಕೊಡಬೇಕು. ಜಿಲ್ಲಾಧಿಕಾರಿಗಳಿಗೆ ಈ ಸೂಚನೆ ನೀಡಲಾಗಿದೆ ಎಂದು ಶಿವನಕುಟ್ಟಿ ತಿಳಿಸಿದರು.