ಮಣಿಪುರ: ಮಣಿಪುರದಲ್ಲಿ ಹಿಂಸಾಚಾರ ತಹಬದಿಗೆ ತರಲು ಸೇನಾಪಡೆಗಳು ಅವಿರತ ಶ್ರಮಿಸುತ್ತಿವೆ. ಆದರೆ ಸೇನಾಪಡೆಗಳಿಗೆ ವಿಶೇಷಾಧಿಕಾರ ಇಲ್ಲದೇ ಕಾರ್ಯಾಚರಣೆ ನಡೆಸುವುದು ಕಷ್ಟ ಸಾಧ್ಯವಾಗುತ್ತಿದೆ.
19 ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುವ ಪ್ರದೇಶಗಳನ್ನು ಪ್ರಕ್ಷುಬ್ಧ ಪ್ರದೇಶಗಳೆಂದು ಗುರುತಿಸಲಾಗಿದ್ದು, ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕಾದರೆ ಮ್ಯಾಜಿಸ್ಟ್ರೇಟ್ ಒಬ್ಬರ ಉಪಸ್ಥಿತಿ ಇರಲೇಬೇಕೆಂದು ಆಗ್ರಹಿಸುತ್ತಿವೆ. ತಮ್ಮ ವಿರುದ್ಧದ ಸುಳ್ಳು ಆರೋಪಗಳು ಬಾರದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಆಗ್ರಹವನ್ನು ಸೇನಾ ಅಧಿಕಾರಿಗಳು ಮುಂದಿಟ್ಟಿದ್ದಾರೆ.
19 ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಮಣಿಪುರದಲ್ಲಿ ಎಎಫ್ಎಸ್ ಪಿಎ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಎಎಫ್ಎಸ್ ಪಿಎ ಸೇನಾಪಡೆಗಳಿಗೆ ಸಂಘರ್ಷದ ಪ್ರದೇಶಗಳಲ್ಲಿ ವಿಶೇಷ ಅಧಿಕಾರವನ್ನು ನೀಡುತ್ತದೆ. ಮಣಿಪುರದಲ್ಲಿ 2022 ರ ಏಪ್ರಿಲ್ ನಲ್ಲಿ 15 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಎಫ್ಎಸ್ ಪಿಎ ಯನ್ನು ತೆಗೆದುಹಾಕಲಾಗಿತ್ತು. ಇದರೊಂದಿಗೆ ಈ ವರ್ಷ ಮಾರ್ಚ್ ನಲ್ಲಿ ಮತ್ತೆ 4 ಠಾಣೆಗಳ ವ್ಯಾಪ್ತಿಯಲ್ಲಿ ಎಎಫ್ಎಸ್ ಪಿಎಯನ್ನು ಹಿಂಪಡೆಯಲಾಗಿತ್ತು.
ಈ ಪ್ರದೇಶಗಳು ಮುಖ್ಯವಾಗಿ ಇಂಫಾಲ್ ಕಣಿವೆಯಲ್ಲಿವೆ ಮತ್ತು ತೊಂದರೆಗೊಳಗಾದ ಪ್ರದೇಶ ಕಾಯಿದೆಯು ಈ ವರ್ಷದ ಏಪ್ರಿಲ್‌ನಿಂದ ಇನ್ನೂ ಆರು ತಿಂಗಳ ಕಾಲ ರಾಜ್ಯದ ಇತರ ಭಾಗಗಳಲ್ಲಿ ಜಾರಿಯಲ್ಲಿರುತ್ತದೆ.
ಅಧಿಕಾರಿಗಳ ಪ್ರಕಾರ, ಸೇನಾಪಡೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಾಧಾರ ಆರೋಪ ಮಾಡಲಾಗುತ್ತಿದ್ದು, ಆರೋಪಿತ ದೌರ್ಜನ್ಯಗಳ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ನೀಡುವಂತೆ ಕೇಳಿದ್ದ ಮಣಿಪುರ ಬಾರ್ ಅಸೋಸಿಯೇಷನ್ ಹೇಳಿಕೆಯ ಬಗ್ಗೆ ತೀವ್ರ ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.