ಕುಂಬಳೆ: ಚೇವಾರು ಸಮೀಪದ ಪೆರ್ಮುದೆಯಲ್ಲಿ ಭಾನುವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಅಟೋ ಚಾಲಕ ಮೃತಪಟ್ಟಿದ್ದಾರೆ. ಮೃತರನ್ನು ಚೇವಾರ್ ನಿವಾಸಿ ಅಟೋ ಚಾಲಕ ಎಚ್ ಪ್ರಕಾಶ್ ಅಲಿಯಾಸ್ ಕಿಶೋರ್ (34) ಎಂದು ಗುರುತಿಸಲಾಗಿದೆ. ಇವರು ಚೇವಾರ್ ನಿಲ್ದಾಣದಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದರು.
ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರಕಾಶ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ರಸ್ತೆಯ ಪಕ್ಕದಲ್ಲಿ ಹಾಕಲಾಗಿದ್ದ ಇಂಟರ್‍ಲಾಕ್ ಕಲ್ಲುಗಳಿಗೆ ಡಿಕ್ಕಿ ಹೊಡೆದು ಅವಘಾತ ನಡೆದಿದೆ. ಪ್ರಯಾಣಿಕರನ್ನು ಇಳಿಸಿ ಹಿಂತಿರುಗುತ್ತಿದ್ದಾಗ ಪಲ್ಟಿಯಾಗಿದೆ. ಸ್ಥಳಕ್ಕೆ ಧಾವಿಸಿದ ಸ್ಥಳೀಯ ನಿವಾಸಿಗಳು ಪ್ರಕಾಶ್ ಅವರನ್ನು ಆಟೋ ರಿಕ್ಷಾದಿಂದ ಹೊರತೆಗೆದು ಬಂದ್ಯೋಡು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ.
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಪೊಡಿಪಳ್ಳ ಎಂಬಲ್ಲೂ ಆಟೋ-ರಿಕ್ಷಾ ಅಪಘಾತವಾಗಿ ಕುಂಬ್ಡಾಜೆ ಮುನಿಯೂರಿನ ಫಕ್ರುದ್ದೀನ್ ಎಂಬವರ ಪುತ್ರ ಮುಹಮ್ಮದ್ (45) ಮೃತರಾಗಿದ್ದರು. ಮುಹಮ್ಮದ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.