ಕೀವ್: ರಷ್ಯಾ ರಾಜಧಾನಿ ಮಾಸ್ಕೊ ಮೇಲೆ ಉಕ್ರೇನ್ ಸೋಮವಾರ ಮುಂಜಾನೆ ಡ್ರೋನ್ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ದಕ್ಷಿಣ ಉಕ್ರೇನ್‌ನ ಬಂದರುಗಳ ಮೂಲಸೌಕರ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಎರಡು ವಸತಿ ರಹಿತ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮಾಸ್ಕೊ ಮೇಯರ್ ಸೊಬ್ಯಾನಿನ್ ತಿಳಿಸಿದ್ದಾರೆ.
ಒಂದು ಡ್ರೋನ್ ಕೊಮ್‌ಸೊಮೊಲ್‌ಸ್ಕೈ ಹೆದ್ದಾರಿ ಸಮೀಪ ಬಿದ್ದಿದೆ. ಅಂಗಡಿಯ ಕಿಟಕಿಗಳು ಮತ್ತು ಮನೆಯೊಂದರ ಚಾವಣಿಗೆ ಹಾನಿಯಾಗಿದೆ ಎಂದು ರಷ್ಯಾ ಮಾಧ್ಯಮವೊಂದು ವರದಿ ಮಾಡಿದೆ. ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತೇ ಎಂದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಮತ್ತೊಂದು ಡ್ರೋನ್, ದಕ್ಷಿಣ ಮಾಸ್ಕೊ ಕಚೇರಿಯೊಂದರ ಮೇಲೆ ದಾಳಿ ನಡೆಸಿದೆ. ಹಲವು ಮಹಡಿಗಳಿಗೆ ಹಾನಿಯಾಗಿದೆ. ತರ್ತು ರಕ್ಷಣಾ ಪಡೆಯು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ.
ತಕ್ಷಣಕ್ಕೆ ಉಕ್ರೇನ್ ಅಧಿಕಾರಿಗಳು ದಾಳಿಯ ಹೊಣೆ ಹೊತ್ತಿಲ್ಲ
: ರಷ್ಯಾ ರಾಜಧಾನಿ ಮಾಸ್ಕೊ ಮೇಲೆ ಉಕ್ರೇನ್ ಸೋಮವಾರ ಮುಂಜಾನೆ ಡ್ರೋನ್ ದಾಳಿ ನಡೆಸಿದೆ. ಇದರಿಂದ ಕೆರಳಿದ ರಷ್ಯಾ ದಕ್ಷಿಣ ಉಕ್ರೇನ್‌ನ ಬಂದರುಗಳ ಮೂಲಸೌಕರ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಎರಡು ವಸತಿ ರಹಿತ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮಾಸ್ಕೊ ಮೇಯರ್ ಸೊಬ್ಯಾನಿನ್ ತಿಳಿಸಿದ್ದಾರೆ. ಒಂದು ಡ್ರೋನ್ ಕೊಮ್‌ಸೊಮೊಲ್‌ಸ್ಕೈ ಹೆದ್ದಾರಿ ಸಮೀಪ ಬಿದ್ದಿದೆ. ಅಂಗಡಿಯ ಕಿಟಕಿಗಳು ಮತ್ತು ಮನೆಯೊಂದರ ಚಾವಣಿಗೆ ಹಾನಿಯಾಗಿದೆ ಎಂದು ರಷ್ಯಾ ಮಾಧ್ಯಮವೊಂದು ವರದಿ ಮಾಡಿದೆ.
ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತೇ ಎಂದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಇನ್ನೊಂದು ಡ್ರೋನ್ ದಕ್ಷಿಣ ಮಾಸ್ಕೊ ಕಚೇರಿಯೊಂದರ ಮೇಲೆ ದಾಳಿ ನಡೆಸಿದೆ. ಹಲವು ಮಹಡಿಗಳಿಗೆ ಹಾನಿಯಾಗಿದೆ. ತರ್ತು ರಕ್ಷಣಾ ಪಡೆಯು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ತಕ್ಷಣಕ್ಕೆ ಉಕ್ರೇನ್ ಅಧಿಕಾರಿಗಳು ದಾಳಿಯ ಹೊಣೆ ಹೊತ್ತಿಲ್ಲ.