ಬದಿಯಡ್ಕ: ರಾಮಾಯಣ ವಾರಾಚರಣೆ ಸಮಿತಿ ಬದಿಯಡ್ಕ ಇವರ ನೇತೃತ್ವದಲ್ಲಿ ಕಳೆದ ಏಳು ವರ್ಷಗಳಲ್ಲಿ ನಡೆದು ಬರುತ್ತಿರುವ ರಾಮಾಯಣ ವಾರಾಚರಣೆ ಇಂದಿನಿಂದ 23ರ ವರೆಗೆ ಹಾಗೂ ಆ. 06 ರಿಂದ 15ರ ವರೆಗೆ ಅಪರಾಹ್ನ 2.30ರಿಂದ ಸಂಜೆ 6 ಗಂಟೆಯ ತನಕ ಬದಿಯಡ್ಕ ನವಜೀವನ ವಿದ್ಯಾಲಯದ ಸಮೀಪದಲ್ಲಿರುವ ಶ್ರೀರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.
ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಇಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಾಹಿತಿ ಪ್ರಮೀಳ ಚುಳ್ಳಿಕ್ಕಾನ ದೀಪೋಜ್ವಲನೆಗೈಯ್ಯುವರು. ವಿಶ್ರಾಂತ ಪ್ರಾಂಶುಪಾಲ ಎಂ. ನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು. ಯಕ್ಷಗಾನ ಭಾಗವತ ಗೋವಿಂದ ಭಟ್ ಬೇಂದ್ರೋಡು ಅಭ್ಯಾಗತರಾಗಿ ಪಾಲ್ಗೊಳ್ಳುವರು. ಸಂಜೆ 4 ರಿಂದ ಪವನ್ ಕುಮಾರ್ ನಾಯಕ್ ಮತ್ತು ಬಳಗ ಬದಿಯಡ್ಕ ಇವರಿಂದ ದಾಸ ಸಂಕೀರ್ತನೆ ಜರಗಲಿರುವುದು.