ನವದೆಹಲಿ: ಕೇರಳಕ್ಕೆ ಎರಡನೇ ವಂದೇಭಾರತ್ ರೈಲನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಈ ಸಂಬಂಧ ರೈಲ್ವೆ ಸಚಿವಾಲಯ ಅಂತಿಮ ಅನುಮೋದನೆ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಇಂದು ಬೆಳಗ್ಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ್ದರು. ಚರ್ಚೆಯಲ್ಲಿ ವಂದೇಭಾರತ್ ಎಕ್ಸ್ ಪ್ರೆಸ್ ಮಂಜೂರಾತಿ ಬಗ್ಗೆ ಭರವಸೆ ದೊರೆಯಿತು. ಬಳಿಕ ರೈಲ್ವೇ ಸಚಿವಾಲಯ ವಂದೇಭಾರತಕ್ಕೆ ಅನುಮತಿ ನೀಡಿದೆ. ಹೊಸ ರೈಲಿನ ಮಾರ್ಗ ಮತ್ತು ನಿಲುಗಡೆಗಳ ಬಗ್ಗೆ ಸಚಿವಾಲಯ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.
ಕೇರಳದ ಮೊದಲ ವಂದೇ ಭಾರತ್ ಎಕ್ಸ್‍ಪ್ರೆಸ್‍ಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 25 ರಂದು ಚಾಲನೆ ನೀಡಿದ್ದರು. ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಕೂಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ಗೆÉ ಕೇರಳದಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿತ್ತು. ವಂದೇಭಾರತ್ ಪ್ರಸ್ತುತ ತಿರುವನಂತಪುರಂ-ಕಾಸರಗೋಡು ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ.