ಕಠ್ಮಂಡು: ನೇಪಾಳ ಹಾಗೂ ಭಾರತ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಜಯನಗರ್- ಬಿಜಲ್ಪುರ- ಬರ್ದಿಬಾಸ್ ರೈಲು ಮಾರ್ಗದ ಕಾರ್ಯಾಚರಣೆ ಭಾನುವಾರ ಆರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಠ್ಮಂಡು: ನೇಪಾಳ ಹಾಗೂ ಭಾರತ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಜಯನಗರ್- ಬಿಜಲ್ಪುರ- ಬರ್ದಿಬಾಸ್ ರೈಲು ಮಾರ್ಗದ ಕಾರ್ಯಾಚರಣೆ ಭಾನುವಾರ ಆರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುರ್ತಾ- ಬಿಜಲ್ಪುರ ರೈಲು ವಿಭಾಗದ ಕಾರ್ಯಾಚರಣೆಗೆ ನೇಪಾಳದ ಮೂಲಸೌಕರ್ಯ ಮತ್ತು ಸಾರಿಗೆ ಸಚಿವ ಪ್ರಕಾಶ್ ಜ್ವಾಲಾ ಅವರು ಬಿಜಲ್ಪುರದಲ್ಲಿ ಚಾಲನೆ ನೀಡಿದರು ಎಂದು ಭಾರತದ ರಾಯಭಾರಿ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
'ಈ ರೈಲು ಸಂಪರ್ಕದಿಂದ ಎರಡು ದೇಶಗಳ ನಡುವಿನ ಜನರಿಗೆ ಹಾಗೂ ದೇಶಕ್ಕೆ ಸಾಕಷ್ಟು ಲಾಭ ಆಗಲಿದ್ದು, ನೇಪಾಳದಲ್ಲಿ ವಾಣಿಜ್ಯೋದ್ಯಮ ಮತ್ತು ಪ್ರವಾಸೋದ್ಯಮ ಅಬಿವೃದ್ಧಿಯಾಗಲಿದೆ' ಎಂದು ಜ್ವಾಲಾ ಹೇಳಿದ್ದಾರೆ.
68.7 ಕಿ.ಮೀ ಇರುವ ಜಯನಗರ್- ಬಿಜಲ್ಪುರ- ಬರ್ದಿಬಾಸ್ ಮಾರ್ಗದ 2ನೇ ಹಂತದ ಕುರ್ತಾ- ಬಿಜಲ್ಪುರ ಮಾರ್ಗವು ಒಟ್ಟು 17.3 ಕಿ.ಮೀ ಇದ್ದು, ಕುರ್ತಾ, ಪಿಪ್ರಾದಿ, ಲೋಹರ್‌ಪಟ್ಟಿ, ಸಿಂಗ್‌ಯಹಿ ಮತ್ತು ಬಿಜಲ್ಪುರ ಸೇರಿ 5 ನಿಲ್ದಾಣ ಹೊಂದಿದೆ. ಈ ಯೋಜನೆಗಾಗಿ ಭಾರತ ₹783.83 ಕೋಟಿ ಅನುದಾನ ನೀಡಿದೆ.
ಜಯನಗರ್- ಕುರ್ತಾದ ಮೊದಲ ಹಂತದ ಮಾರ್ಗವು ಕಳೆದ ವರ್ಷ ಏಪ್ರಿಲ್‌ನಲ್ಲಿ ಲೋಕಾರ್ಪಣೆಯಾಗಿದೆ. ಮೂರನೇ ಹಂತದ ಕಾಮಗಾರಿಗಾಗಿ ಈಗ ಭೂಮಿ ಸ್ವಾಧೀನ ಕಾರ್ಯ ನಡೆಯುತ್ತಿದೆ.