ಚೀನಾ: ಕಂಪನಿಗಳು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಅಭ್ಯರ್ಥಿಗಳ ಹುಡುಕಾಟಕ್ಕಾಗಿ ಜಾಹೀರಾತು ನೀಡುತ್ತದೆ. ಆದರೆ ಚೀನಾದ ಎಲೆಕ್ಟ್ರಾನಿಕ್ಸ್ ಕಂಪನಿಯ ಉದ್ಯೋಗ ಜಾಹೀರಾತು ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗಿದೆ.
ಚೀನಾ: ಕಂಪನಿಗಳು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಅಭ್ಯರ್ಥಿಗಳ ಹುಡುಕಾಟಕ್ಕಾಗಿ ಜಾಹೀರಾತು ನೀಡುತ್ತದೆ. ಆದರೆ ಚೀನಾದ ಎಲೆಕ್ಟ್ರಾನಿಕ್ಸ್ ಕಂಪನಿಯ ಉದ್ಯೋಗ ಜಾಹೀರಾತು ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗಿದೆ.
ಉದ್ಯೋಗ ಅರ್ಜಿದಾರರು ಧೂಮಪಾನ, ಮದ್ಯಪಾನ ಮತ್ತು ಮಾಂಸ ಸೇವನೆಯಿಂದ ದೂರವಿರಬೇಕು ಎಂದು ಕಂಪನಿ ಷರತ್ತು ವಿಧಿಸಿದೆ.
ಉದ್ಯೋಗ ಜಾಹೀರಾತಿನಲ್ಲಿ ಏನಿದೆ?: ಕಂಪನಿಯು ಮಾಸಿಕ ವೇತನವನ್ನು 5,000 ಯುವಾನ್ (US$700) 57 ಸಾವಿರ ರೂ. ನಿಂದ ಪ್ರಾರಂಭವಾಗುತ್ತದೆ. ಸಂಬಳ ಜತೆಗೆ ಉಚಿತ ವಸತಿ ನೀಡಲಾಗುತ್ತದೆ. ಉದ್ಯೋಗ ಅರ್ಜಿದಾರರು ಧೂಮಪಾನ, ಮದ್ಯಪಾನ ಮತ್ತು ಮಾಂಸ ಸೇವನೆಯಿಂದ ದೂರವಿರಬೇಕು ಎಂದು ಎಲೆಕ್ಟ್ರಾನಿಕ್ಸ್ ಕಂಪನಿಯ ಜಾಹೀರಾತಿನ ಮೂಲಕವಾಗಿ ಷರತ್ತು ವಿಧಿಸಿದೆ. ಇದು ದೇಶದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ವಿಷಯವಾಯಿತು.
ಆನ್‌ಲೈನ್ ಸಂದರ್ಶನದ ಸಮಯದಲ್ಲಿ, ಗೊಂದಲಕ್ಕೊಳಗಾದ ಅರ್ಜಿದಾರರು ಈ ಕಂಪನಿಯ ಷರತ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಮಾಂಸ ತಿನ್ನುವುದು ಪಾಪ, ಕೊಲ್ಲುವುದು ಕ್ರೂರ, ಮಾಂಸ ತಿನ್ನದಿರುವುದು ಒಳ್ಳೆಯ ಕೆಲಸ' ಎಂದು ಸಿಬ್ಬಂದಿ ಹೇಳಿದ್ದರು. ಅರ್ಜಿದಾರರು ಕಂಪನಿಯ HR ಸಿಬ್ಬಂದಿಯೊಂದಿಗೆ ತಮ್ಮ ಸಂವಾದವನ್ನು ಹಂಚಿಕೊಂಡ ನಂತರ ಹೆಸರಿಸದ ಕಂಪನಿಯನ್ನು ಟೀಕಿಸಿದ್ದಾರೆ.
ಮಾಂಸಾಹಾರ ಸೇವನೆ, ಧೂಮಪಾನ, ಮದ್ಯ ಸೇವಿಸದ ಅಭ್ಯರ್ಥಿಗಳನ್ನು ಹುಡುಕುವ ಚೀನಾದ ಎಲೆಕ್ಟ್ರಾನಿಕ್ಸ್ ಕಂಪನಿಯ ಉದ್ಯೋಗ ಜಾಹೀರಾತು ಆನ್‌ಲೈನ್‌ನಲ್ಲಿ ಬಿಸಿ… ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.