ಉಪ್ಪಳ: ಚಿಪ್ಪಾರು ಅಮ್ಮೇರಿಯ ಅಮ್ಮೇರಿ ಕೊಟ್ಯ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ನ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವ ಸಲಹೆಗಾರ ರಿತೇಶ್ ಅಂಚನ್ ದುಬೈ, ನೂತನ ಅಧ್ಯಕ್ಷರಾಗಿ ವಸಂತ ಮಾಸ್ತರ್ ಅಮ್ಮೇರಿ, ಉಪಾಧ್ಯಕ್ಷರಾಗಿ ಸುಜಾತ ಅಮ್ಮೇರಿ,ಕಾರ್ಯದರ್ಶಿಯಾಗಿ ಜಯಂತಿ ಉದಯಕುಮಾರ್, ಜೊತೆ ಕಾರ್ಯದರ್ಶಿಗಳಾಗಿ ಅಕ್ಷಿತ ಕುರುಡಪದವು, ಹರ್ಷಿತ್ ಅಮ್ಮೇರಿ, ಕೋಶಾಧಿಕಾರಿಯಾಗಿ ಶರಣ್ ಪೂಜಾರಿ ಅಮ್ಮೇರಿ, ಲೆಕ್ಕ ಪರಿಶೋಧಕರಾಗಿ ಮಿಥುನ್ ಸುಣ್ಣಾಡ, ಕ್ರೀಡಾ ಕಾರ್ಯದರ್ಶಿ ವಿನಯ ಅಮ್ಮೇರಿ, ದರ್ಶನ್, ಮನೋರಂಜನಾ ಕಾರ್ಯದರ್ಶಿಯರಾಗಿ ಸುನೀತಾ ಜಯಂತ, ಸಂಧ್ಯಾ ಪದ್ಮನಾಭ ಇವರನ್ನು ಆರಿಸಲಾಯಿತು.