ತಿರುವನಂತಪುರಂ: ಮರುನಾಡನ್ ಮಲಯಾಳಿ ಆನ್‍ಲೈನ್ ಚಾನೆಲ್ ಮಾಲೀಕ ಮತ್ತು ಸಂಪಾದಕ ಶಾಜನ್ ಸ್ಕಾರಿಯಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು(ಸೋಮವಾರ) ಪರಿಗಣಿಸಲಿದೆ. ಮುಖ್ಯ ನ್ಯಾಯಮೂರ್ತಿ ಡಿ. ವೈ.ಚಂದ್ರಚೂಡ್ ಅವರಿದ್ದ ಪೀಠಕ್ಕೆ ಅರ್ಜಿ ತಲುಪಿದೆ.
ಕುನ್ನತ್ತುನಾಡ್ ಶಾಸಕ ಪಿವಿ ಶ್ರೀನಿಜನ್ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಶಾಜನ್ ಸ್ಕಾರಿಯಾ ಪೋಲೀಸರಿಗೆ ಬೇಕಾಗಿದ್ದಾರೆ. ಇದರ ನೆಪದಲ್ಲಿ ಮರುನಾಡನ್ ಮಲಯಾಳಿ ಕಚೇರಿಗಳ ಮೇಲೆ ಪೋಲೀಸರು ದಾಳಿ ನಡೆಸಿದ್ದಾರೆ. ತಿರುವನಂತಪುರ ಪಟ್ಟಾ ಕಚೇರಿಯಲ್ಲಿದ್ದ ಎಲ್ಲ ಕಂಪ್ಯೂಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. 29 ಕಂಪ್ಯೂಟರ್‍ಗಳು, ಕ್ಯಾಮೆರಾಗಳು ಮತ್ತು ಲ್ಯಾಪ್‍ಟಾಪ್‍ಗಳನ್ನು ಕೊಚ್ಚಿ ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಂಸ್ಥೆಯೊಳಗೆ ಪ್ರವೇಶಿಸದಂತೆ ನೌಕರರಿಗೂ ಸೂಚನೆ ನೀಡಲಾಗಿದೆ. ರಾತ್ರಿ 12 ಗಂಟೆ ಸುಮಾರಿಗೆ ಈ ಭಯೋತ್ಪಾದಕ ವಾತಾವರಣ ಸೃಷ್ಟಿಯಾಯಿತು. ನೌಕರÀರ ಲ್ಯಾಪ್‍ಟಾಪ್ ಕೂಡ ವಶಕ್ಕೆ ಪಡೆಯಲಾಗಿದೆ. ಶಾಜನ್ ಸ್ಕಾರಿಯಾ ತನ್ನನ್ನು ಬಂಧಿಸಿ ಮುಗಿಸಿಬಿಡಲು ಹೊರಟಿರುವ ಸರ್ಕಾರದ ನಡೆಯನ್ನು ಅರಿತು ತಲೆಮರೆಸಿಕೊಂಡಿದ್ದಾನೆ.
ಶಾಜನ್ ಸ್ಕಾರಿಯಾ ವಿರುದ್ಧ ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶಾಜನ್ ಸ್ಕಾರಿಯಾ ಅವರು ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸಿದರು ಆದರೆ ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿತು. ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಪೋಲೀಸರು ಹೊರಿಸಿರುವ ಆರೋಪ ನ್ಯಾಯಯುತವಾಗಲು ಸಾಧ್ಯವಿಲ್ಲ ಎಂಬುದು ಶಾಜನ್ ಸ್ಕಾರಿಯಾ ಅವರ ವಾದ.
ಶಾಜನ್ ಸ್ಕಾರಿಯಾ ಅವರ ಸಂಸ್ಥೆಯ ಕಂಪ್ಯೂಟರ್ ಗಳನ್ನು ವಶಪಡಿಸಿಕೊಳ್ಳುವುದು ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಮಾಧ್ಯಮ ಕಾರ್ಯಕರ್ತೆಯರ ಮನೆಗಳನ್ನು ಶೋಧಿಸಿ, ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿರುವುದನ್ನು ಕೇರಳ ಪತ್ರಕರ್ತರ ಸಂಘ (ಕೆ.ಯು.ಡಬ್ಲ್ಯು ಜೆ)ಖಂಡಿಸಿದೆ.