HEALTH TIPS

ಗಡಿ ದಾಟುವುದಕ್ಕೂ ಹಿಂಜರಿಯುವುದಿಲ್ಲ: ಪಾಕಿಸ್ತಾನಕ್ಕೆ ರಾಜನಾಥ್‌ ಎಚ್ಚರಿಕೆ

               ದ್ರಾಸ್‌ : 1999ರ ಕಾರ್ಗಿಲ್ ಯುದ್ಧದ ವೇಳೆ ಭಾರತದ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿರಲಿಲ್ಲ. ಒಂದು ವೇಳೆ ಬಯಸಿದ್ದರೆ ವಿರೋಧಿಗಳ ಗಡಿ ದಾಟಿ ಹೋಗಬಹುದಿತ್ತು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದ್ದಾರೆ.

               ಕಾರ್ಗಿಲ್‌ ವಿಜಯ ದಿವಸದ ಆಚರಣೆಯ ಪ್ರಯುಕ್ತ ಇಲ್ಲಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿ ಅವರು ಮಾತನಾಡಿದರು.

             'ದೇಶದ ಗೌರವ ಹಾಗೂ ಘನತೆ ನಮಗೆ ಎಲ್ಲಕ್ಕಿಂತಲೂ ಮಿಗಿಲು. ಅದನ್ನು ಕಾಪಾಡಲು ಹಾಗೂ ಅದನ್ನು ಮರಳಿ ಪಡೆಯಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧ. ನಮ್ಮ ಸೈನಿಕರು ಆಪರೇಷನ್ ವಿಜಯ್‌ ವೇಳೆ ಗಡಿ ದಾಟಿರಲಿಲ್ಲ. ಯಾಕೆಂದರೆ ನಾವು ಶಾಂತಿಯನ್ನು ಬಯಸುವವರು' ಎಂದು ಅವರು ನುಡಿದಿದ್ದಾರೆ.

                'ಕಾರ್ಗಿಲ್ ಯುದ್ಧದ ವೇಳೆ ನಾವು ಗಡಿ ನಿಯಂತ್ರಣ ರೇಖೆಯನ್ನು ದಾಟಿರಲಿಲ್ಲ. ಅದರರ್ಥ ಅದು ನಮಗೆ ಸಾಧ್ಯವಿಲ್ಲ ಎಂದಲ್ಲ. ಒಂದು ವೇಳೆ ನಮ್ಮ ಗಡಿಯನ್ನು ಕಾಪಾಡಲು ಗಡಿ ದಾಟಬೇಕಿದ್ದರೆ ಅದನ್ನು ಮಾಡಲು ನಾವು ಹಿಂಜರಿಯುವುದಿಲ್ಲ. ಅದರಲ್ಲಿ ಸಂಶಯವೂ ಬೇಡ' ಎಂದು ಅವರು ಹೇಳಿದ್ದಾರೆ.

             'ಪಾಕಿಸ್ತಾನದೊಂದಿಗಿನ ಮನಸ್ತಾಪವನ್ನು ನಾವು ರಾಜತಾಂತ್ರಿಕ ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನಿಸಿದೆವು. ಅದರೆ ಅದುವೇ ನಮಗೆ ಮುಳುವಾಯಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದೊಂದಿಗೆ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಕಾಶ್ಮೀರ ವಿಷಯ ಸಂಬಂಧ ಪಾಕಿಸ್ತಾನಕ್ಕೂ ಭೇಟಿ ನೀಡಿದರು. ಅದರೆ ಪಾಕಿಸ್ತಾನ ಕಾರ್ಗಿಲ್ ಅನ್ನು ವಶಪಡಿಸಿಕೊಳ್ಳಲು ತನ್ನ ಸೈನಿಕರನ್ನು ಕಳುಹಿಸಿತು' ಎಂದಿದ್ದಾರೆ.

                'ಅ‍ಪರೇಷನ್ ವಿಜಯ್‌ನಲ್ಲಿ ಭಾರತವು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿತು. ಆ ಮೂಲಕ ಗಡಿ ವಿವಾದದ ಬಗ್ಗೆ ‍ಪಾಕಿಸ್ತಾನಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸಂದೇಶ ರವಾನೆ ಮಾಡಿತು. ದೇಶದ ಹಿತಾಸಕ್ತಿಯ ವಿಷಯಕ್ಕೆ ಬಂದರೆ ಭಾರತೀಯ ಸೈನ್ಯವು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ' ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries