ಕುಂಬಳೆ: ಸದಸ್ಯರ ಆರೋಗ್ಯದತ್ತ ಕ್ಯಾಂಪೆÇ್ಕ ಚಿತ್ತ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಕುಂಬಳೆ ಶಾಖೆಯ ಸಕ್ರಿಯ ಸದಸ್ಯ ಬಂಬ್ರಾಣ ಗ್ರಾಮದ ಸುಬ್ಬಣ್ಣ ಬಿ. ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಅವರು ರೂ. 82,287 ಸಹಾಯಧನದ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಪದ್ಮರಾಜ ಪಟ್ಟಾಜೆ,ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕ್ಯಾಂಪ್ಕೋ ಬದಿಯಡ್ಕ ಪ್ರಾದೇಶಿಕ ಹಿರಿಯ ವ್ಯವಸ್ಥಾಪಕ ಗಿರೀಶ್ ಇ, ನಿರ್ಚಾಲ್ ಶಾಖಾ ಪ್ರಬಂಧಕ ಜಯನ್ ಇ, ಸುಬ್ಬಣ್ಣ ಬಿ ಮತ್ತು ಅವರ ಪತ್ನಿ ಗೀತ, ಪುತ್ರ ಯತೀಶ್ ಕುಮಾರ್ ಉಪಸ್ಥಿತರಿದ್ದರು.