ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಎನ್‍ಸಿಸಿ ಘಟಕದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಬುಧವಾರ ಜರಗಿತು. ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಕೆ.ಎಚ್. ಗೌಡ ಹಾಗೂ ಕೋ ಹವಾಲ್ದಾರ್ ಮೇಜರ್ ವಿಕ್ರಮ್ ಸಿಂಗ್ ಯಾದವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಾರತ ಪಾಕಿಸ್ತಾನ ನಡುವೆ ನಡೆದ ಒಪ್ಪಂದ, ನಂತರ ಒಪ್ಪಂದವನ್ನು ಮುರಿದ ಪಾಕಿಸ್ತಾನ ಸೇನೆಯ ವಿವರವನ್ನು ಮಕ್ಕಳ ಮನಮುಟ್ಟುವಂತೆ ವಿವರಿಸಿದರು. ಕಾರ್ಗಿಲ್ ಯುದ್ಧದ ವೀಡಿಯೋ ಚಿತ್ರಣವನ್ನು ಪ್ರದರ್ಶಿಸಲಾಯಿತು. ಮುಖ್ಯೋಪಾಧ್ಯಾಯಿನಿ ಮಿನಿ ಪಿ., ಅಧ್ಯಾಪಕ ನಾರಾಯಣ ಕೆ. ಮಾತನಾಡಿದರು. ಶಾಲಾ ಎನ್.ಸಿ.ಸಿ. ಅಧಿಕಾರಿ ಅಧ್ಯಾಪಕ ಕೃಷ್ಣ ಯಾದವ್ ನಿರೂಪಿಸಿದರು. ಎನ್.ಸಿ.ಸಿ.ಕೇಡೆಟ್‍ಗಳು ದೇಶಭಕ್ತಿಗೀತೆಯನ್ನು ಹಾಡಿದರು.