ಮಂಜೇಶ್ವರ: ಹಲಸು ಆರೋಗ್ಯಪೂರ್ಣ ನೈಸರ್ಗಿಕ ಫಲ. ಹಲಸಿನ ಅನೇಕ ಮೌಲ್ಯವರ್ಧಿತ ಉತ್ಪನ್ನಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ರಾಹಕರು ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕೂಡಾ ಇದರ ಮಹತ್ವವನ್ನು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಅರ್ಥಪೂರ್ಣವಾದದ್ದು ಎಂದು ವೆಂಕಟಕೃಷ್ಣ ಶರ್ಮ ಮುಳಿಯ ಅಭಿಪ್ರಾಯಪಟ್ಟರು.
ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಮ್ಮಿಕೊಂಡ ಹಲಸು ಮೇಳದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತಾನಾಡುತ್ತಿದ್ದರು.
ಶಾಲಾ ಸಂಚಾಲಕ ಡಾ. ಜಯಪ್ರಕಾಶ ನಾರಾಯಣ ಕಾರ್ಯಕರ್ಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪಂಚಾಯತಿ ಸದಸ್ಯೆ ರುಕಿಯಾ ಸಿದ್ದಿಕ್, ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ ರಾವ್, ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಶಿವಶಂಕರ. ಬಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಜಿಜಿ ಮೋಳ್, ಮಾತೃ ಸಂಘದ ಅಧ್ಯಕ್ಷೆ ಲಲಿತ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಹಲಸಿನ ವಿವಿಧ ಖಾದ್ಯ ಪದಾರ್ಥಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರಾಂಶುಪಾಲ ರಮೇಶ್. ಕೆ. ಎನ್ ಸ್ವಾಗತಿಸಿ, ಅಧ್ಯಾಪಕ ಲೋಕೇಶ್. ಕೆ ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಅಧ್ಯಾಪಕ ಹರೀಶ. ಜಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರದರ್ಶನದಲ್ಲಿ ಹಲಸಿನ ಗೋಳಿಬಜೆ, ಚಿಪ್ಸ್, ಇಡ್ಲಿ, ಉಡ್ಲುಕ,ಕೇಕ್, ಬಜ್ಜಿ, ಪಾಯಸ, ದೋಸೆ ಹೀಗೆ ವಿವಿಧ ತಿಂಡಿ-ತಿನಸುಗಳು ಗಮನ ಸೆಳೆದವು. ಹಿರಿಯರ ಮಾರ್ಗದರ್ಶನದಲ್ಲಿ ಸ್ವತಃ ವಿದ್ಯಾರ್ಥಿಗಳೇ ತಿಂಡಿ ತಯಾರಿಸಿ ತಂದಿದ್ದರು.