ಬದಿಯಡ್ಕ: ರಾಮಾಯಣ ವಾರಾಚರಣೆ ಸಮಿತಿ ಬದಿಯಡ್ಕ ಇವರ ನೇತೃತ್ವದಲ್ಲಿ ಶ್ರೀರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ಜರಗುತ್ತಿರುವ ರಾಮಾಯಣ ವಾರಾಚರಣೆಯ ಮೂರನೇ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ಯಕ್ಷವಿಹಾರಿ ಬದಿಯಡ್ಕ ಇವರ ನೇತೃತ್ವದಲ್ಲಿ ತರಣಿಸೇನ ಕಾಳಗ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಅಂಬೆಮೂಲೆ ಶಿವಶಂಕರ ಭಟ್, ವೇಣುಗೋಪಾಲ ಬರೆಕರೆ ಚೆಂಡೆ ಮದ್ದಳೆಯಲ್ಲಿ ಸಹಕರಿಸಿದರೆ ಉದಯಶಂಕರ ಭಟ್ ಪಟ್ಟಾಜೆ, ತಲ್ಪಣಾಜೆ ವೆಂಕಟ್ರಮಣ ಭಟ್, ಬೇಂದ್ರೋಡು ಗೋವಿಂದ ಭಟ್ ಭಾಗವತರಾಗಿ ಮುನ್ನಡೆಸಿದರು. ಅರ್ಥದಾರಿಗಳಾಗಿ ಬಾಲಕೃಷ್ಣ ಆಚಾರ್ಯ ನೀರ್ಚಾಲು, ಡಾ. ಬೇ.ಸೀ.ಗೋಪಾಲಕೃಷ್ಣ, ಶ್ಯಾಮ ಆಳ್ವ ಕಡಾರು, ವಿಷ್ಣುಪ್ರಕಾಶ ಪೆರ್ವ, ಗಣೇಶ ಪ್ರಸಾದ ಕಡಪ್ಪು, ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ಪಾತ್ರ ನಿರ್ವಹಣೆ ಮಾಡಿದ್ದರು. ಕರಿಂಬಿಲ ಲಕ್ಷ್ಮಣ ಪ್ರಭು ನಿರೂಪಿಸಿದರು.