ನವದೆಹಲಿ: ಪ್ರಧಾನಿ ಅವರ ಫ್ರಾನ್ಸ್ ಭೇಟಿ ಮತ್ತು ಮಣಿಪುರ ವಿಷಯದಲ್ಲಿ ಪ್ರಧಾನಿ ಮೌನವನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿಡಿಕಾರಿದ್ದಾರೆ. ರಾಹುಲ್ ಅವರನ್ನು 'ಹತಾಶೆಗೊಂಡ ದೊರೆ' (ರಾಜವಂಶಸ್ಥ) ಎಂದು ಕರೆದಿದ್ದಾರೆ.
ನವದೆಹಲಿ: ಪ್ರಧಾನಿ ಅವರ ಫ್ರಾನ್ಸ್ ಭೇಟಿ ಮತ್ತು ಮಣಿಪುರ ವಿಷಯದಲ್ಲಿ ಪ್ರಧಾನಿ ಮೌನವನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿಡಿಕಾರಿದ್ದಾರೆ. ರಾಹುಲ್ ಅವರನ್ನು 'ಹತಾಶೆಗೊಂಡ ದೊರೆ' (ರಾಜವಂಶಸ್ಥ) ಎಂದು ಕರೆದಿದ್ದಾರೆ.
ಪ್ರಧಾನಿಯವರ ಫ್ರಾನ್ಸ್ ಭೇಟಿ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮಣಿಪುರ ವಿಷಯದಲ್ಲಿ ಪ್ರಧಾನಿ ಮೌನವಾಗಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. 'ಮಣಿಪುರ ಸುಡುತ್ತಿದೆ. ಇಯು (ಯುರೋಪಿಯನ್ ಒಕ್ಕೂಟ) ಸಂಸತ್ತಿನಲ್ಲಿ ಭಾರತದ ಆಂತರಿಕ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿದೆ. ಪ್ರಧಾನಿ ಒಂದು ಮಾತನಾಡುತ್ತಿಲ್ಲ. ಇದೆಲ್ಲದರ ನಡುವೆ ಪ್ರಧಾನಿ ಅವರಿಗೆ ರಫೇಲ್ 'ಬಾಸ್ಟಿಲ್ ಡೇ ಪರೇಡ್'ಗೆ ಟಿಕೆಟ್ ನೀಡುತ್ತಿದೆ' ಎಂದು ಟೀಕಿಸಿದ್ದರು.
ರಾಹುಲ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸ್ಮೃತಿ ಇರಾನಿ, 'ಭಾರತದ ಆಂತರಿಕ ವಿಷಯಗಳಲ್ಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಬಯಸುತ್ತಿರುವ ಹತಾಶೆಗೊಂಡ ರಾಜವಂಶಸ್ಥ(ದೊರೆ), 'ಮೇಕ್ ಇನ್ ಇಂಡಿಯಾ'ದ ಮಹತ್ವಾಕಾಂಕ್ಷೆಯನ್ನು ಮಲಿನಗೊಳಿಸುತ್ತಿದ್ದಾನೆ. ಪ್ರಧಾನಿಗಳು ರಾಷ್ಟ್ರೀಯ ಗೌರವ ಪಡೆದಾಗ ಅದನ್ನು ಅಣಕಿಸುತ್ತಾನೆ' ಎಂದು ಬರೆದುಕೊಂಡಿದ್ದಾರೆ.
'ರಕ್ಷಣಾ ಒಪ್ಪಂದಗಳು ರಾಜವಂಶಸ್ಥನ ಮನೆ ಬಾಗಿಲಿಗೆ ಬರುತ್ತಿಲ್ಲ ಎಂದು ಜನರಿಂದ ತಿರಸ್ಕರಿಸಲ್ಪಟ್ಟ ವ್ಯಕ್ತಿ ಕುದಿಯುತ್ತಿದ್ದಾನೆ' ಎಂದು ರಾಹುಲ್ ವಿರುದ್ಧ ಪರೋಕ್ಷ ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಗುರುವಾರ ಫ್ರಾನ್ಸ್‌ಗೆ ತೆರಳಿದ್ದು. ಶುಕ್ರವಾರ ನಡೆದ 'ಬಾಸ್ಟಿಲ್ ಡೇ ಪರೇಡ್'ನಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಧಾನಿ ಮೋದಿ ಅವರಿಗೆ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು, ದೇಶದ ಅತ್ಯುನ್ನತ ಗೌರವ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹಾನರ್' ಪ್ರಶಸ್ತಿ ನೀಡಿ ಸನ್ಮಾನಿಸಿದರು.