ಬೆಂಗಳೂರು: ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತಂತೆ ಎನ್‌ಸಿಪಿ ಪಕ್ಷದ ನಾಯಕರಾದ ಶರದ್ ಪವಾರ್ ಹಾಗೂ ಅಜಿತ್ ಪವಾರ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್‌ಗಳು ಹರಿದಾಡುತ್ತಿವೆ.
ಬೆಂಗಳೂರು: ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತಂತೆ ಎನ್‌ಸಿಪಿ ಪಕ್ಷದ ನಾಯಕರಾದ ಶರದ್ ಪವಾರ್ ಹಾಗೂ ಅಜಿತ್ ಪವಾರ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್‌ಗಳು ಹರಿದಾಡುತ್ತಿವೆ.
ಅಜಿತ್ ಪವಾರ್ ಅವರು ಶರದ್ ಪವಾರ್‌ಗೆ ಮೋಸ ಮಾಡಿದ್ದಾರೆ ಎಂಬ ಪೋಸ್ಟರ್‌ಗಳು ಹರಿದಾಡುತ್ತಿವೆ.
ಮಹಾರಾಷ್ಟ್ರದ ಹಲವು ಪ್ರದೇಶಗಳು ಸೇರಿದಂತೆ ಮುಂಬೈನಲ್ಲಿ ಈ ಪೋಸ್ಟರ್ ಹಾಕಲಾಗಿದೆ. ಹಾಗೇ ಈ ಪೋಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಪ್ರಯಾಗ್ ಎಂಬುವರು ಯಾವುದೇ ವೆಬ್ ಸಿರೀಸ್‌ಗಿಂತಲೂ ಮಹಾರಾಷ್ಟ್ರ ರಾಜಕೀಯ ರೋಚಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದವಾರ ಪಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಶರದ್ ಪವಾರ್ ಭಾಗವಹಿಸಿದ್ದರು. ಅಲ್ಲಿನ ಚಿತ್ರವನ್ನು ಹಂಚಿಕೊಂಡಿರುವ ಮೊಹಿತ್ ಎಂಬುವರು ಅಜಿತ್ 'Checkmate' ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಭಾನುವಾರ ಬೋರ್ ಆಗುವುದನ್ನು ತಪ್ಪಿಸಿದ್ದಕ್ಕೆ ಅಜಿತ್ ಪವಾರ್‌ಗೆ ಧನ್ಯವಾದಗಳು ಎಂದು ಕೆಲವರು ಹೇಳಿದ್ದಾರೆ.