ಉಪ್ಪಳ: ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ‘ಬಡವು’ ಯೋಜನೆಯ 57ನೇ ಸೇವಾ ಕಾರ್ಯವು ಉಪ್ಪಳ ಸಮೀಪದ ಪೈವಳಿಕೆ ಲಾಲ್‍ಬಾಗ್ ಬೋಳಂಗಳ ನಿವಾಸಿ ಕಲ್ಯಾಣಿ ಕೃಷ್ಣ ದಂಪತಿಗಳ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರಗಿತು. ಇವರ ಮನೆಯು ಶೋಚನಿಯಾವಸ್ಥೆಯಲ್ಲಿದ್ದು, ಜೊತೆಗೆ ಮುಪ್ಪಿನ ಕಾಲದಲ್ಲಿ ದುಡಿದು ಸಾಕಾಬೇಕಾದ ಮಕ್ಕಳ ಅನಾರೋಗ್ಯ ಇನ್ನೊಂದು ಕಡೆ. ಈ ಪರಿಸ್ಥಿತಿಯಲ್ಲಿ ಕಲ್ಯಾಣಿಯವರಿಗೆ ದಿಕ್ಕು ತೋಚದ ಪರಿಸ್ಥಿತಿ ಮೂರು ಮಂದಿಯ ಚಿಕಿತ್ಸೆಯ ವೆಚ್ಚ, ಮನೆಯ ಖರ್ಚು ವೆಚ್ಚ ಹೀಗೆ ಆರ್ಥಿಕವಾಗಿ ನೊಂದ ಕುಟುಂಬಕ್ಕೆ ನೆರವು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಾಯಂಜನಿ ಯುವ ಬಳಗ ಸಂಸ್ಥಾಪಕÀ ರಂಜಿತ್ ಕುಮಾರ್, ಅಧ್ಯಕ್ಷÀ ಅಜಯ್ ರಾಜ್ ಉಪ್ಪಳ, ಸದಸ್ಯರಾದ ನವೀನ್ ಗುರಿಕಾರ, ನವೀನ್, ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಗೌರವಾಧ್ಯಕ್ಷ ಸದಾಶಿವ ಹೊಸಬೆಟ್ಟು, ಸಂಸ್ಥಾಪಕ ರಾಜ್ಯ ಘಟಕ ಸಲಹೆಗಾರ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸ್ಥಾಪಕ ಅಧ್ಯಕ್ಷ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕ ರಾಜ್ಯ ಅದ್ಯಕ್ಷ ವಂಶಿ ಪಂಡಿತ್ ಕಣ್ಣೂರು, ಸಂಸ್ಥಾಪಕ ರಾಜ್ಯ ಸಮಿತಿ ಪ್ರಚಾರ ಅಧ್ಯಕ್ಷ ಸಚಿನ್ ಜಿ ಮಣೇಲ್‍ಬೈಲ್, ರಾಜ್ಯ ಸಮಿತಿ ಸದಸ್ಯ ಶರಣ್ ಜಿ ಮಣೇಲ್‍ಬೈಲ್, ರಮೇಶ್ ಕುಲಾಲ್ ನಾರಾಯಣಮಂಗಲ, ಮಹಿಳಾ ಘಟಕದ ಸದಸ್ಯರಾದ ಅಮಿತಾ ಶೆಟ್ಟಿ, ಬಬಿತಾ ಶೆಟ್ಟಿ, ಪೂರ್ಣಿಮ ರಾವ್ ಮುಂತಾದವರು ಉಪಸ್ಥಿತರಿದ್ದರು.