ತ್ರಿಶೂರ್: ಇಲ್ಲಿಯ ಕುರಿಯಾಚಿರಾ ಸೇಂಟ್ ಪಾಲ್ಸ್ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ (ಎಟಿಎಲ್) ಅನ್ನು ಕೇಂದ್ರ ಎಲೆಕ್ಟ್ರಾನಿಕ್ಸ್, ಐಟಿ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ನಿನ್ನೆ ಉದ್ಘಾಟಿಸಿದರು.
ಸಚಿವ ರಾಜೀವ್ ಚಂದ್ರಶೇಖರ್ ಅಧ್ಯಯನಗೈದ ಮೊದಲ ಶಾಲೆ ಕೂಡ ಕುರಿಯಚಿರ ಸೇಂಟ್ ಪಾಲ್ಸ್ ಶಾಲೆಯೆಂಬುದೂ ಗಮನಾರ್ಹ.
ಕುರಿಯಾಚಿರ ಸೇಂಟ್ ಪಾಲ್ಸ್ ನಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಆರಂಭಿಸಿರುವುದು ಸಂತಸ ತಂದಿದೆ. ಇದು ನಾನು ಓದಿದ ಮೊದಲ ಶಾಲೆ ಎಂಬ ಹೆಮ್ಮೆ ನನಗಿದೆ. ಅಟಲ್ ಟಿಂಕರಿಂಗ್ ಲ್ಯಾಬ್ಸ್ ದೇಶದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕøತಿಯನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
ಭಾರತವು ತನ್ನ ತಂತ್ರಜ್ಞಾನ ವೇಗವರ್ಧಿತ ದಶಕದ ಮೂಲಕ ಚಲಿಸುತ್ತಿರುವಾಗ ಭಾರತವು ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ ಯುವ ಭಾರತೀಯರನ್ನು ಹೆಚ್ಚು ಸಮರ್ಥ ಮತ್ತು ನೈಪುಣ್ಯವಂತರನ್ನಾಗಿ ಮಾಡಲು ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಗುರಿ ಹೊಂದಿದೆ ಎಂದರು. ಉದ್ಘಾಟನೆಯ ನಂತರ ರಾಜೀವ್ ಚಂದ್ರಶೇಖರ್ ಅವರು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.