ಬದಿಯಡ್ಕ: ರೋಟರಿ ಇಂಟರ್‍ನೇಶನಲ್ ಬದಿಯಡ್ಕ ಇವರ ವತಿಯಿಂದ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಬದಿಯಡ್ಕದ ಪ್ರಸಿದ್ಧ ಹಿರಿಯ ವೈದ್ಯ ಡಾ. ಸೂರ್ಯ ಎನ್. ಶಾಸ್ತ್ರಿ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಬದಿಯಡ್ಕದಂತಹ ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲದಿಂದ ಅವರು ವೈದ್ಯಕೀಯ ಸೇವೆಯನ್ನು ಜನರಿಗೆ ನೀಡುತ್ತಿದ್ದರು. ಇದನ್ನು ಮನಗಂಡು ರೋಟರಿ ಬದಿಯಡ್ಕ ಅವರನ್ನು ಗೌರವಿಸಿದೆ. ರೋಟರಿಯ ಅಧ್ಯಕ್ಷ ರಾಧಾಕೃಷ್ಣ ಪೈ ಬದಿಯಡ್ಕ ಸನ್ಮಾನಿಸಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ನಿರೂಪಿಸಿದರು. ಅನಂತಕುಮಾರ್ ಬರ್ಲ ವಂದಿಸಿದರು. ಸದಸ್ಯರು ಪಾಲ್ಗೊಂಡಿದ್ದರು.