ಅಲಪ್ಪುಳ: ಮಣಿಪುರದಲ್ಲಿ ಪ್ರತಿಭಟನಕಾರರು ಮಹಿಳೆಯರನ್ನು ಅವಮಾನಿಸುತ್ತಿರುವುದನ್ನು ವಿರೋಧಿಸಿ ಎಸ್‍ಎಫ್‍ಐ ಭಾರತ ಮಾತೆಗೆ ಅವಮಾನ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಧಾರ್ಮಿಕ ಭಯೋತ್ಪಾದಕರ ಬೆಂಬಲ ಪಡೆಯಲು ಎಸ್.ಎಫ್.ಐ ಅವಮಾನಕರ ಚಿತ್ರೀಕರಣ ನಡೆಸಿದೆ. ಎಸ್.ಎಫ್.ಐ. ಘಟಕ ಸಮಿತಿಯು ಆಲಪ್ಪುಳ ಎಸ್.ಡಿ. ಕಾಲೇಜಿನ ಮುಂಭಾಗದಲ್ಲಿ ಭಾರತಾಂಬೆಯನ್ನು ವಿರೂಪಗೊಳಿಸಿದ ಬ್ಯಾನರ್ ಅನ್ನು ಪ್ರದರ್ಶಿಸಿ ಅವಮಾನ ಮಾಡಲಾಗಿದೆ. ಇದರ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದವು. ಆದರೆ ಎಸ್.ಎಫ್.ಐ.ನ ಗೂಂಡಾಗಿರಿಗೆ ಹೆದರಿ ಕಾಲೇಜು ಅಧಿಕಾರಿಗಳು ಸ್ಪಂದಿಸಲು ಸಿದ್ಧರಿಲ್ಲ.
ಒಂದು ರಾಷ್ಟ್ರವು ಅತ್ಯಾಚಾರ ಮಾಡುತ್ತಿದೆ. ಅತ್ಯಾಚಾರವು ಸಾಂಸ್ಕøತಿಕ ಸಂಕೇತ ಎಂದು ಬ್ಯಾನರ್‍ನಲ್ಲಿ ಭಾರತ ಮಾತೆಯನ್ನು ಅವಮಾನಿಸಲಾಗಿದೆ. ಪಾಪ್ಯುಲರ್ ಪ್ರಂಟ್ ಅನ್ನು ನಿಷೇಧಿಸಿದ ಬಳಿಕ, ಕ್ಯಾಂಪಸ್ ಪ್ರಂಟ್ ಈಗ ಎಸ.ಎಫ್.ಐ. ಒಳಗೆ ನುಸುಳಿ ಹಳೆಯ ಚಾಳಿ ಮುಂದುವರಿಸಿರುವುದು ವೇದ್ಯವಾಗಿದೆ. ಜೊತೆಗೆ ಅವರನ್ನು ಸಂತೋಷಪಡಿಸಲು ಮತ್ತು ಅಂತಹ ಜನರನ್ನು ಸಂಘಟನೆಗೆ ಆಕರ್ಷಿಸಲು ಎಸ್.ಎಫ್.ಐ. ಪ್ರಯತ್ನಿಸುತ್ತಿರುವುದು ಇದರಿಂದ ದೃಢವಾಗಿದೆ.
ಎಸ್.ಎಫ್.ಐ. ಈ ಹಿಂದೆಯೂ ಭಾರತ ಮಾತೆಯನ್ನು ಮತ್ತು ರಾಷ್ಟ್ರೀಯ ಚಿಹ್ನೆಗಳನ್ನು ಅವಮಾನಿಸಿದೆ. ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲುವ ನಿಲುವಿನ ವಿರುದ್ಧದ ಅಭಿಯಾನದಲ್ಲೂ ಇಂತಹ ಅವಮಾನಕರ ಚಿತ್ರಗಳನ್ನು ಪ್ರಸಾರ ಮಾಡಲಾಗಿತ್ತು. ಹಿಂದೂ ದೇವತೆಗಳನ್ನು ಅವಮಾನಿಸುವ ಚಿತ್ರಗಳನ್ನು ಎಸ್‍ಎಫ್‍ಐ ನಿಯಮಿತವಾಗಿ ಪ್ರಸಾರ ಮಾಡುತ್ತದೆ.
ಎಸ್‍ಎಫ್‍ಐ ವಿರುದ್ಧ ಮಾತಾಡಿದ ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿನಿಗೆ ಬಲಾತ್ಕಾರಗೈದು, ತಂದೆ ಇಲ್ಲದ ಮಗುವಿಗೆ ನಿನ್ನನ್ನು ತಾಯಿಯಾಗಿಸುತ್ತೇನೆ ಎಂದು ಎಸ್‍ಎಫ್‍ಐ ಮುಖಂಡ ಅಬ್ಬರಿಸಿದಾಗ, ತಿರುವನಂತಪುರದಲ್ಲಿ ಅತ್ಯಾಚಾರ ಸಂತ್ರಸ್ತೆ ಬೆತ್ತಲೆಯಾಗಿ ರಸ್ತೆಗಿಳಿಯಬೇಕಾದಾಗ, ವಾಳಯಾರ್‍ನಲ್ಲಿ ಹಸುಳೆಗಳನ್ನು ಕೊಂದು ನೇಣು ಹಾಕಿದಾಗ ಮೌನ ವಹಿಸಿದ್ದವರು ಈಗ ಭಾರತಮಾತೆಯನ್ನು ಅವಮಾನಿಸಿ ಧಾರ್ಮಿಕ ಉಗ್ರರ ರಕ್ಷಣೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ಎಸ್.ಎಫ್.ಐ ಮಾಡಿದ ಕ್ರಮದ ವಿರುದ್ದ ವ್ಯಕ್ತವಾಗಿದೆ.