ಕಾಸರಗೋಡು: ಜಿಲ್ಲಾಮಟ್ಟದ ಕೃಷಿ ಅಭಿವೃದ್ಧಿ ಸಮಿತಿಯ ಮೊದಲ ಸಭೆ ಕಾಸರಗೋಡು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು. ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಜಿಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೃಷ್ಣನ್, ಕೇರಾ ರೈತ ಸಂಘದ ಪ್ರತಿನಿಧಿ ಕೆ.ಪಿ.ಸಹದೇವ, ಕಿಸಾನ್ ಸಭಾ ಪ್ರತಿನಿಧಿ ಎಂ.ಅಸೈನಾರ್ ಚಿರಪ್ಪುರಂ, ರೈತ ಸಂಘದ ಪ್ರತಿನಿಧಿ ರಘುದೇವನ್, ಪ್ರಸಕ್ತ ವರ್ಷದ ಮಹಿಳಾ ಪ್ರತಿನಿಧಿ ಶ್ಯಾಮಲಾ, ರೈತ ಪ್ರತಿನಿಧಿ ಕೆ.ಕುಞÂರಾಮನ್, ಡಿಕೆಟಿಎಫ್ ಪ್ರತಿನಿಧಿ ಎ.ವಾಸುದೇವನ್, ವಿವಿಧ ಪಕ್ಷದ ಪ್ರತಿನಿಧಿಗಳಾದ ದಾಮೋದರನ್ ಬೆಳ್ಳಿಗೆ, ಮೈಕಲ್ ಎಂ ಪೂವಾತ್ತನಿ, ಸಿಎ ಅಬ್ದುಲ್ಲಾ ಕುಞÂ, ವಿವಿಧ ಇಲಾಖೆ ಅಧಿಕಾರಿಗಳು, ಆತ್ಮಯೋಜನಾ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು ಹಾಗೂ ಸಹಾಯಕ ಕೃಷಿ ನಿರ್ದೇಶಕರು ಉಪಸ್ಥಿತರಿದ್ದರು. ಪ್ರಧಾನ ಕೃಷಿ ಅಧಿಕಾರಿ ಮಿನಿ ಪಿ.ಜಾನ್ ಸ್ವಾಗತಿಸಿ, ತಾಂತ್ರಿಕ ಸಹಾಯಕಿ ಎನ್.ಮೀರಾ ವಂದಿಸಿದರು.