ಕಾಸರಗೋಡು: ಮೊಗ್ರಾಲ್ ಪುತ್ತುರು ಟಿ.ವಿ.ಎಸ್ ರಸ್ತೆಯಲ್ಲಿ ಬೀದಿನಾಯಿಗಳ ದಾಂಧಲೆಗೆ ಸಿಲುಕಿ ಮೂರು ಆಡುಗಳು ಭೀಭತ್ಸವಾಗಿ ಕೊಲೆಯಾಗಿದೆ. ಇಲ್ಲಿನ ನಿವಾಸಿ ಆಯಿಷಾ ಎಂಬವರು ಸಾಕುತ್ತಿರುವ ಆಡುಗಳನ್ನು ಗೂಡಿಗೆ ದಾಳಿ ನಡೆಸಿದ 12ರಷ್ಟು ಬೀದಿನಾಯಿಗಳ ಗುಂಪು ಕಚ್ಚಿ ಎಳೆದಾಡಿ ಕೊಂದುಹಾಕಿದೆ. ಆಡುಗಳ ಚೀರಾಟ ಕೇಳಿ ಮನೆಯವರು ಹೊರ ಬರುತ್ತಿದ್ದಂತೆ ಬೀದಿನಾಯಿಗಳ ಗುಂಪು ಓಡಿಪರಾರಿಯಾಗಿದೆ.
ಜಿಲ್ಲೆಯಲ್ಲಿ ಬೀದಿನಾಯಿಗಳ ಉಪಟಳದಿಂದ ಹಾದಿನಡೆಯಲಾಗದ ಪರಿಸ್ಥಿತಿ ಎದುರಾಗಿದೆ. ಬೀದಿನಾಯಿಗಳನ್ನು ಸೆರೆಹಿಡಿದು ಗೂಡುಗಳಲ್ಲಿ ಕೂಡಿಹಾಕುವ ವ್ಯವಸ್ಥೆ ಸ್ಥಳೀಯಾಡಳಿತ ಸಂಸ್ಥೆಗಳು ನಡೆಸಬೇಕು. ಆಕ್ರಮಣಕಾರಿ ಬೀದಿನಾಯಿಗಳು ಸಾಕು ಪರಾಣಿಗಳಿಗೆ ಮಾತ್ರವಲ್ಲಿ ಹಾದಿ ನಡೆಯುವವರಿಗೂ ಭೀತಿಯನ್ನು ತಂದೊಡ್ಡುತ್ತಿರುವುದಾಗಿ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.