ಇಂಫಾಲ: ಬಿಷ್ಣುಪುರ ಜಿಲ್ಲೆಯ ಗಡಿಯಲ್ಲಿರುವ ಚುರಚಂದಪುರದ ಟೊರ್ಬಂಗ್ ಬಜಾರ್ ಪ್ರದೇಶದಲ್ಲಿ ಸಶಸ್ತ್ರ ಮಹಿಳೆಯರ ಗುಂಪು ಖಾಲಿಯಿದ್ದ ಕನಿಷ್ಠ 10 ಮನೆಗಳಿಗೆ ಮತ್ತು ಶಾಲೆಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಇಂಫಾಲ: ಬಿಷ್ಣುಪುರ ಜಿಲ್ಲೆಯ ಗಡಿಯಲ್ಲಿರುವ ಚುರಚಂದಪುರದ ಟೊರ್ಬಂಗ್ ಬಜಾರ್ ಪ್ರದೇಶದಲ್ಲಿ ಸಶಸ್ತ್ರ ಮಹಿಳೆಯರ ಗುಂಪು ಖಾಲಿಯಿದ್ದ ಕನಿಷ್ಠ 10 ಮನೆಗಳಿಗೆ ಮತ್ತು ಶಾಲೆಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಶನಿವಾರ ಸಂಜೆ ನಡೆದ ದಾಳಿಯ ಸಂದರ್ಭದಲ್ಲಿ ಮಾನವ ಗುರಾಣಿಯಂತೆ ವರ್ತಿಸಿದ ನೂರಾರು ಮಹಿಳೆಯರ ನೇತೃತ್ವದ ಗುಂಪು ಸ್ಥಳೀಯವಾಗಿ ತಯಾರಿಸಿದ ಬಾಂಬುಗಳನ್ನು ಸ್ಫೋಟಿಸಿದ್ದಾರೆ.
'ನೂರಾರು ಮಹಿಳೆಯರು ಬಾಂಬ್ ಸಹಿತ ದಾಳಿ ನಡೆಸಲು ಬರುತ್ತಿರುವುದನ್ನು ಕಂಡು ನಮಗೆ ಭಯವಾಯಿತು. ಬಳಿಕ ಮನೆ ಮತ್ತು ಬಿಎಸ್‌ಎಫ್ ವಾಹನಗಳಿಗೆ ಬೆಂಕಿ ಹಚ್ಚಲು ಯತ್ನಿಸಿದರು. ಇದು ಪ್ರತೀಕಾರದ ಭಾಗ ಎಂದು ಅರಿವಾಯಿತು' ಎಂದು ಸ್ಥಳೀಯರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಉದ್ರಿಕ್ತ ಗುಂಪು ಬಿಎಸ್‌ಎಫ್ ನ ಕ್ಯಾಸ್ಪರ್ ವಾಹನವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ನಿಯೋಜನೆಗೊಂಡಿದ್ದ ಸ್ಥಳೀಯ ಪೊಲೀಸರು ಅವರನ್ನು ತಡೆದಿದ್ದಾರೆ.