ಕಾಸರಗೋಡು: ಜಿಲ್ಲೆಯಲ್ಲಿ ಜ್ವರಬಾಧೆ ದಿನಕಳೆದಂತೆ ಹೆಚ್ಚುತ್ತಿದ್ದು, ರೋಗ್ಯ ಇಲಾಖೆ ಜಾಗ್ರತೆ ಪಾಲಿಸಲು ನಿರ್ದೇಶನ ನೀಢಿದೆ. ಮಳೆಗಾಲ ಆರಂಭಗೊಂಡ ನಂತರ ಇದುವರೆಗೆ 8ಸಾವಿರಕ್ಕೂ ಹೆಚ್ಚು ಮಂದಿಗೆ ಜ್ವರ ಬಾಧಿಸಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ವರ್ಷ ಜಿಲ್ಲೆಯಲ್ಲಿ 97323ಮಂದಿಗೆ ಜ್ವರ ಬಾಧಿಸಿದೆ. ಸೋಮವಾರ ಒಂದೇ ದಿನ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚುಮಂದಿಗೆ ಜ್ವರ ಬಾಧಿಸಿದೆ. ಇವರಲ್ಲಿ ಶಂಕಿತ ಡೆಂಘೆ, ಇಲಿ ಜ್ವರವೂ ಪತ್ತೆಯಾಗಿದೆ. ಇವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜುಲೈ ತಿಂಗಳಲ್ಲಿ ಸೋಮವಾರದ ವರೆಗೆ 81ಮಂದಿಯಲ್ಲಿ ಡೆಂಘೆ ರೋಗ ಲಕ್ಷಣ ಪತ್ತೆಯಾಗಿದ್ದು, ಇವರಲ್ಲಿ 15ಮಂದಿಗೆ ಡೆಂಘೆ ಖಾತ್ರಿಯಾಗಿದೆ. ಈ ವರ್ಷ ಒಟ್ಟು 92ಮಂದಿಗೆ ಡೆಂಘೆ ಬಾಧಿಸಿದೆ. 221ಮಂದಿಯಲ್ಲಿ ಡಎಂಘೆ ಲಕ್ಷಣ ಕಂಡುಬಂದಿದೆ.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಜ್ವರಬಾಧಿಸಿ ಚಿಕಿತ್ಸೆಗೆ ಆಗಮಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜ್ವರಲಕ್ಷಣ ಕಂಡುಬಂದಲ್ಲಿ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದರ ಜತೆಗೆ ಸೊಳ್ಳೆಗಳಿಂದ ರಕ್ಷಣೆ ಪಡೆದುಕೊಳ್ಳುವಂತೆಯೂ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.
: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಜ್ವಬಾಧಿಸಿ ಚಿಕಿತ್ಸೆಗೆ ಆಗಮಿಸಿರುವ ರೋಗಿಗಳು.