ಕಾಸರಗೋಡು: ದ. ಕೊರಿಯದಲ್ಲಿ ಆ2 ರಿಂದ 12ರ ರವರೆಗೆ ನಡೆಯಲಿರುವ 25ನೇ ವಿಶ್ವ ಸ್ಕೌಟ್ ಜಾಂಬೂರಿ ಶಿಬಿರದಲ್ಲಿ ಭಾಗವಹಿಸಲು ಕಾಸರಗೋಡಿನ ವೈ. ಯವನಿಕಾ ಆಯ್ಕೆಯಾಗಿದ್ದಾರೆ.ಈಕೆ ಪ್ರಸಕ್ತ ಮಂಗಳೂರಿನ ಬೋಸ್ಕೋಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾರೆ.
ಅಮೆರಿಕಾದಲ್ಲಿ ಮರ್ಚಂಟ್ ನೇವಿ ಉದ್ಯೋಗಿಯಾಗಿರುವ ಬಂದ್ಯೋಡು ಮುಟ್ಟತ್ ನಿವಾಸಿವೈ. ಯಶವಂತ್-ಯಮುನಾ ದಂಪತಿ ಪುತ್ರಿ. ಎರಡನೇ ತರಗತಿಯಿಂದ ಸ್ಕೌಟ್ ತರಬೇತಿ ಪಡೆಯುತ್ತಿರುವ ಯವನಿಕಾ 2015ರಲ್ಲಿ ಚಿನ್ನದ ಪದಕ ಪಡೆದು ಕ್ಲಬ್ ಬುಲ್ ಬುಲ್ ವಿಭಾಗದಲ್ಲಿ ಭಾಗವಹಿಸಿದ್ದರು.2022 ರಲ್ಲಿ ರಾಜ್ಯಪುರಸ್ಕಾರ ಪ್ರಶಸ್ತಿಯನ್ನು ಗೆದ್ದ ಯವನಿಕಾ, ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ಸಮಾನವಾಗಿ ಮಿಂಚಿದ್ದಾರೆ. ಕರ್ನಾಟಕ ಶಾಲಾ ಯುವಜನೋತ್ಸವದಲ್ಲಿ ನೃತ್ಯ, ಹಾಡು ಮತ್ತು ಇಂಗ್ಲಿಷ್ ಭಾಷಣದಲ್ಲಿ ಪ್ರಶಸ್ತಿ ಪಡೆದಿದ್ದಾರೆ.