ಕಾಸರಗೋಡು: ಸೀತಾಂಗೋಳಿ ಸಮೀಪದ ಬೇಳ ಚೌಕಾರು ಪಿಲಿಪಳ್ಳ ನಿವಾಸಿ ಕೊಳವೆ ಬಾವಿ ನಿರ್ಮಾಣದ ಗುತ್ತಿಗೆದಾರ ಥಾಮಸ್ ಕ್ರಾಸ್ತ (63) ಕೊಲೆ ಪ್ರಕರಣದ ಆರೋಪಿಗಳಾದ ಚೌಕಾರು ಪಿಲಿಪಳ್ಳ ನಿವಾಸಿ ಮುನೀರ್(39)ಹಾಗೂ ಈತನ ಪತ್ನಿ ಸಹೋದರ ಚೌಕಾರು ನಿವಾಸಿ ಅಶ್ರಫ್(39)ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳಲು ಪೊಲೀಸರು ನ್ಯಯಾಲಯಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಇಬ್ಬರೂ ಆರೋಪಿಗಳನ್ನು ಮ್ರತದೇಹ ಪತ್ತೆಯಾದ ಜಾಗಕ್ಕೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದ್ದಾರೆ. ಥಾಮಸ್ ಕ್ರಾಸ್ತ ಅವರ ಮೃತದೇಹ ಮನೆ ಸನಿಹದ ಶೌಚಗೃಹದ ಹೊಂಡದಲ್ಲಿ ಜುಲೈ ಇರಂದುಪತ್ತೆಯಾಗಿತ್ತು.