ಮುಂಬೈ: ನಕಲಿ ಉತ್ಪನ್ನಗಳ ಹಾವಳಿಯಿಂದ ರೈತರು ಮೋಸ ಹೋಗುವುದನ್ನು ತಡೆಯಲು ಆಹಾರ ಧಾನ್ಯಗಳ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರ ಪೂರೈಕೆಯನ್ನು ಅಗತ್ಯವಸ್ತುಗಳ ಕಾಯ್ದೆಯಡಿ ತರಲು ಮಹಾರಾಷ್ಟ್ರ ರಾಜ್ಯ ಸಂಪುಟವು ನಿರ್ಧಾರ ತೆಗೆದುಕೊಂಡಿದೆ.
ಮುಂಬೈ: ನಕಲಿ ಉತ್ಪನ್ನಗಳ ಹಾವಳಿಯಿಂದ ರೈತರು ಮೋಸ ಹೋಗುವುದನ್ನು ತಡೆಯಲು ಆಹಾರ ಧಾನ್ಯಗಳ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರ ಪೂರೈಕೆಯನ್ನು ಅಗತ್ಯವಸ್ತುಗಳ ಕಾಯ್ದೆಯಡಿ ತರಲು ಮಹಾರಾಷ್ಟ್ರ ರಾಜ್ಯ ಸಂಪುಟವು ನಿರ್ಧಾರ ತೆಗೆದುಕೊಂಡಿದೆ.
ಸೋಮವಾರ ಆರಂಭವಾದ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಈ ಕಾಯ್ದೆಯಡಿ ಬಂಧಿಸಲ್ಪಟ್ಟ ವ್ಯಕ್ತಿಗೆ ಸುಲಭವಾಗಿ ಜಾಮೀನು ಸಿಗುವುದಿಲ್ಲ ಎಂದು ಹೇಳಿದರು.
ವಿಳಂಬವಾದ ಮುಂಗಾರು, ಬೆಳೆ ವೈಫಲ್ಯ ಹಾಗೂ ಎರಡನೇ ಬಾರಿಗೆ ಬಿತ್ತನೆ ಸಾಧ್ಯತೆ ಪರಿಗಣಿಸಿ ರಾಜ್ಯ ಸರ್ಕಾರವು ತುರ್ತು ಪರಿಹಾರ ಯೋಜನೆಯನ್ನೂ ರೂಪಿಸಿದೆ ಎಂದು ಫಡಣವೀಸ್ ಹೇಳಿದರು.
'ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿಲ್ಲ. ಈಗಾಗಲೇ ಮುಂಗಾರು ಹಂಗಾಮಿನ ಅರ್ಧ ಅವಧಿ ಮುಗಿದು ಹೋಗಿದೆ. ಬಿತ್ತನೆ ಕೂಡ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಗಿದೆ. ಸರ್ಕಾರ ಸಂಪುಟ ವಿಸ್ತರಣೆಯಲ್ಲಿ ತಲ್ಲೀನವಾಗಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಗಂಭೀರವಾಗಿಲ್ಲ' ಎಂದು ಕಾಂಗ್ರೆಸ್ ಶಾಸಕ ಬಾಳಾಸಾಹೇಬ್ ಥೋರಟ್ ಹೇಳಿದರು.
ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವಂತೆ ಥೋರಟ್ ಅವರು, ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಮನವಿ ಮಾಡಿದ ನಂತರ, ಫಡಣವೀಸ್ ಅವರು ಸಂಪುಟ ತೆಗೆದುಕೊಂಡಿರುವ ನಿರ್ಧಾರ ಪ್ರಕಟಿಸಿದರು.