ತಿರುವನಂತಪುರ: ಕೆಎಸ್‍ಆರ್‍ಟಿಸಿ ನೌಕರರಿಗೆ ಮೊದಲ ಕಂತಿನ ವೇತನ ವಿತರಿಸಿದೆ. ನಿನ್ನೆ ರಾತ್ರಿಯೇ ವೇತನ ವಿತರಿಸಲಾಯಿತು.
30 ಕೋಟಿ ಸರ್ಕಾರಿ ಹಣ ಮತ್ತು 8.4 ಕೋಟಿ ಬ್ಯಾಂಕ್ ಓವರ್‍ಡ್ರಾಫ್ಟ್ ವಿತರಿಸಲಾಗಿದೆ. ಪ್ರಸ್ತುತ ಎರಡನೇ ಕಂತಿನ ವೇತನ ಬಾಕಿ ಇದೆ.
ಸದ್ಯ ಎರಡನೇ ಕಂತು ವಿಳಂಬವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೇತನ ನೀಡದ ಹಿನ್ನೆಲೆಯಲ್ಲಿ ನೌಕರರು ತೀವ್ರ ಮುಷ್ಕರ ನಡೆಸಲು ನಿರ್ಧರಿಸಿದ್ದರು.ಇದರ ಬೆನ್ನಲ್ಲೇ ನಿನ್ನೆ ರಾತ್ರಿ ಮೊದಲ ಕಂತನ್ನು ವಿತರಿಸಲಾಗಿದೆ.