ಕಾಸರಗೋಡು: ಪೋರ್ಜರಿ ಪ್ರಕರಣದ ಆರೋಪಿ ಎಸ್‍ಎಫ್‍ಐ ಮಾಜಿ ಮುಖಂಡೆ ಕೆ. ವಿದ್ಯಾಗೆ ಜಾಮೀನು ನೀಡಲಾಗಿದೆ. ನಕಲಿ ಅನುಭವ ಪ್ರಮಾಣ ಪತ್ರ ಬಳಸಿ ಕರಿಂತಲಂ ಕಾಲೇಜಿನಲ್ಲಿ ಅತಿಥಿ ಶಿಕ್ಷಕಿಯಾಗಿ ನೇಮಕಗೊಂಡ ಪ್ರಕರಣದಲ್ಲಿ ವಿದ್ಯಾ ಇಂದು ಜಾಮೀನು ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ನ್ಯಾಯಾಲಯ ಈ ಹಿಂದೆ ಮಧ್ಯಂತರ ಜಾಮೀನು ನೀಡಿತ್ತು. ಅದನ್ನು ವಿಸ್ತರಿಸಲಾಯಿತು. ಇದೇ ವೇಳೆ ವಿದ್ಯಾ ವಿರುದ್ಧ ಗಂಭೀರ ಆರೋಪ ಕಂಡು ಬಂದಿರುವುದಾಗಿ ಪೋಲೀಸರು ವರದಿ ನೀಡಿದ್ದಾರೆ. ನಕಲಿ ಸರ್ಟಿಫಿಕೇಟ್ ಮಾಡಿ ಉದ್ಯೋಗ ಕದಿಯಲು ವಿದ್ಯಾ ಯತ್ನ ನಡೆಸಿರುವುದು ಗಂಭೀರ ಅಪರಾಧ. ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದು ಪೋಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಆದರೆ ಆಕೆಯ ವಯಸ್ಸು, ಅವಿವಾಹಿತ ಸ್ಥಿತಿ ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಜಾಮೀನು ನೀಡಬೇಕು. ತನಿಖಾ ತಂಡಕ್ಕೆ ಸಹಕರಿಸುವುದಾಗಿ ವಿದ್ಯಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಿದ್ಯಾ ಆರಂಭದಲ್ಲಿ ಮಹಾರಾಜ ಕಾಲೇಜಲ್ಲಿ ಕೆಲಸ ಮಾಡಿರುವುದಾಗಿ ಕರಿಂದಳ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಕಲಿ ಅನುಭವ ಪ್ರಮಾಣಪತ್ರವನ್ನು ಬಳಸಿ ಕೆಲಸ ಮಾಡಿದ್ದಳು.