ಲಖನೌ: ಫೂಲನ್ ದೇವಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಕೋರಿ ಉತ್ತರ ಪ್ರದೇಶದ ಸಚಿವ, ನಿಶಾದ್ ಪಕ್ಷದ ಅಧ್ಯಕ್ಷ ಡಾ. ಸಂಜಯ್ ನಿಶಾದ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಲಖನೌ: ಫೂಲನ್ ದೇವಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಕೋರಿ ಉತ್ತರ ಪ್ರದೇಶದ ಸಚಿವ, ನಿಶಾದ್ ಪಕ್ಷದ ಅಧ್ಯಕ್ಷ ಡಾ. ಸಂಜಯ್ ನಿಶಾದ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
'ಡಕಾಯಿತರ ರಾಣಿ' ಎಂದೇ ಖ್ಯಾತರಾಗಿರುವ ಫೂಲನ್ ದೇವಿ ಸಂಸದೆಯಾಗಿದ್ದರು.
'ಮಾಜಿ ಸಂಸದೆ, ನಾಯಕಿ ಫೂಲನ್ ದೇವಿ ಅವರು ಕೇವಲ ಮೀನುಗಾರ ಸಮಾಜಕ್ಕೆ ಮಾತ್ರವಲ್ಲ, ವಿಶ್ವ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಸಮಾಜವನ್ನು ಜಾಗೃತಗೊಳಿಸಲು ಅನ್ಯಾಯದ ವಿರುದ್ಧ ಹಾಗೂ ಮಹಿಳೆಯರ ಮೇಲಿನ ಶೋಷಣೆ, ಮಹಿಳೆಯರ ಹಕ್ಕು ಮತ್ತು ಘನತೆಯನ್ನು ಕಾಪಾಡಲು ಫೂಲನ್ ದೇವಿ ಹೋರಾಡಿದ್ದಾರೆ ಎಂದು ಸಂಜಯ್ ನಿಶಾದ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
'ನಿಶಾದ್ ಪಕ್ಷವು ಫೂಲನ್ ದೇವಿ ಅವರ ಆದರ್ಶ ಮತ್ತು ಹಾದಿಯನ್ನು ಅನುಸರಿಸುವ ಪಕ್ಷವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಿಶಾದ್ ಪಕ್ಷವು ಶೋಷಿತರು ಮತ್ತು ಹಿಂದುಳಿದವರ ಹಿತಕ್ಕಾಗಿ ಸದಾ ಧ್ವನಿ ಎತ್ತುತ್ತಿದೆ ಎಂದು ಸಂಜಯ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.