ಬದಿಯಡ್ಕ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯದ ಆರಂಭದ ದಿನ ಸೋಮವಾರ ಮಾನ್ಯ ವಲಯ ಸಮಿತಿಯ ವತಿಯಿಂದ ಹಸಿರುವಾಣಿ ಸಮರ್ಪಣೆ ನಡೆಯಿತು.
ಬೆಳಗ್ಗೆ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಿಂದ, ಶ್ರೀ ಅಯ್ಯಪ್ಪ ಭಜನಾ ಮಂದಿರಗಳಿಂದ ಹಸಿರುವಾಣಿ ಸಂಗ್ರಹಿಸಿ ಮಧ್ಯಾಹ್ನ ಶ್ರೀಮಠಕ್ಕೆ ತಲುಪಿಸಲಾಯಿತು. ವಿಜಯ ಕುಮಾರ್ ಮಾನ್ಯ, ಕೃಷ್ಣಮೂರ್ತಿ ಪುದುಕೋಳಿ, ರಾಮ ಕಾರ್ಮಾರು, ಸಂತೋಷ್ ಕುಮಾರ್ ಎಸ್. ಮಾನ್ಯ, ಮಹೇಶ್ ವಳಕ್ಕುಂಜ, ಲಕ್ಷ್ಮೀ ಶೆಟ್ಟಿ ಮಾನ್ಯ, ಜ್ಯೋತಿ ಕಾರ್ಮಾರು, ಸುಂದರ ಶೆಟ್ಟಿ ಕೊಲ್ಲಂಗಾನ, ಶ್ಯಾಮಪ್ರಸಾದ ಮಾನ್ಯ ಮೊದಲಾದವರು ನೇತೃತ್ವ ವಹಿಸಿದ್ದರು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಾದವನ್ನಿತ್ತು, ಶ್ರೀದೇವರ ಪ್ರಸಾದವನ್ನು ನೀಡಿ ಅನುಗ್ರಹಿಸಿದರು.