ಕಾಸರಗೋಡು: ನರ್ಕಿಲಕ್ಕಾಡ್ ಕುಟುಂಬ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಪ್ರಯೋಗಾಲಯ, ಔಷಧಾಲಯ ಹಾಗೂ ರೇಬಿಸ್ ಚಿಕಿತ್ಸೆಗಾಗಿ ನಿರ್ಮಿಸಿರುವ ನೂತನ ಕೊಠಡಿಯ ಉದ್ಘಾಟನಾ ಸಮಾರಂಭ ನಡೆಯಿತು.
ವೆಸ್ಟ್ ಎಳ್ಳೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಸಿ.ಇಸ್ಮಾಯಿಲ್ ನೂತನ ಕಟ್ಟಡದಲ್ಲಿ ಆರಂಭಗೊಂಡ ಪ್ರಯೋಗಾಲಯ, ರ್ಯಾಬೀಸ್ ಚಿಕಿತ್ಸಾ ಕೊಠಡಿಗಳನ್ನು ಉದ್ಘಾಟಿಸಿದರು. ಆರೋಗ್ಯ-ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ತಂಗಚ್ಚನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯೆ ಬಿಂದು ಮುರಳೀಧರನ್, ವೈದ್ಯಾಧಿಕಾರಿ ಅಲಕ್ ಬಿ. ರಾಜ್ ಮತ್ತು ಡಾ.ಅಶ್ವತಿ ಉಪಸ್ಥಿತರಿದ್ದರು.