ತಿರುವನಂತಪುರಂ: ಉಸಿರಾಟದ ಕಾಯಿಲೆಯಿಂದ ನೆಯ್ಯಾಟಿಂಗರ ನಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿಯ ಮಾಜಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಪಿ.ಪಿ.ಮುಕುಂದನ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಮೂಲತಃ ಕಣ್ಣೂರಿನವರಾದ ಮುಕುಂದನ್ ಕೇರಳದ ವಿವಿಧ ಜಿಲ್ಲೆಗಳಲ್ಲಿ ಆರ್‍ಎಸ್‍ಎಸ್ ಪ್ರಚಾರಕರಾಗಿ ಕೆಲಸ ಮಾಡಿದ್ದರು. ಆರ್‍ಎಸ್‍ಎಸ್ ರಾಜ್ಯ ಸಂಪರ್ಕ ಪ್ರಮುಖರಾಗಿ ಬಹು ಜನಜನಿತರಾಗಿದ್ದಾರೆ. ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ದೀರ್ಘಕಾಲ ಸದಸ್ಯರಾಗಿದ್ದರು. ಕೇರಳದ ಪ್ರಸಿದ್ದ ಚಿಂತಕರ ಪಟ್ಟಿಯಲ್ಲಿ ಪಿ.ಪಿ.ಮುಕುಂದನ್ ಪ್ರಮುಖರಲ್ಲಿ ಓರ್ವರಾಗಿದ್ದಾರೆ.