ಕೋಝಿಕ್ಕೋಡ್: ಸಚಿವರ ವಾಹನಕ್ಕೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಮೀನು ಲಾರಿ ಚಾಲಕನಿಗೆ ಪೋಲೀಸರು ಥಳಿಸಿದ್ದಾರೆ ಎಂದು ದೂರಲಾಗಿದೆ.
ಚೇಳಾರಿ ನಿವಾಸಿ ಮುಹಮ್ಮದ್ ಸಾದಿಫ್ ಎಂಬಾತನಿಗೆ ಪೋಲೀಸರು ಥಳಿಸಿದ್ದಾರೆ. ಕೋಝಿಕೋಡ್‍ನ ಸೌತ್ ಬೀಚ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸಚಿವರ ವಾಹನದ ಜೊತೆಯಲ್ಲಿದ್ದ ಪೈಲಟ್ ವಾಹನದಲ್ಲಿದ್ದ ಪೋಲೀಸರು ಸಾದಿಫ್‍ಗೆ ಥಳಿಸಿದ್ದಾರೆ. ಬಳಿಕ ಸಾದಿಫ್ ಕೋಝಿಕ್ಕೋಡ್ ಬೀಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆತನ ಕೈಗೆ ಗಾಯವಾಗಿದೆ. ಸಿಟ್ಟಿಗೆದ್ದ ಸ್ಥಳೀಯರು ಸಚಿವರನ್ನು ತಡೆದು ಪ್ರತಿಭಟನೆ ನಡೆಸಿದರು. ಸಚಿವರ ಸೂಚನೆ ಮೇರೆಗೆ ಥಳಿಸಿದ್ದಾರೆ ಎಂದು ಪೋಲೀಸರು ಹೇಳಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.