HEALTH TIPS

ಮಹಿಳಾ ವೈದ್ಯೆಗೆ ತೊಂದರೆ ನೀಡಿದ ಕಿಡಿಗೇಡಿಗಳು: ಪ್ರಶ್ನಿಸಿದ ಯುವ ವೈದ್ಯನ ಮೇಲೆಯೇ ಹಲ್ಲೆ

                 ರ್ನಾಕುಲಂ: ಮಹಿಳಾ ವೈದ್ಯೆಗೆ ತೊಂದರೆ ಕೊಟ್ಟಿದ್ದನ್ನು ಪ್ರಶ್ನಿಸಿದ ಯುವ ವೈದ್ಯನ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ  ಎರ್ನಾಕುಲಂನಲ್ಲಿ ನಡೆದಿದೆ.

                     ಜೋಸನೀಲ್ ಸೈರಸ್ (26) ಮತ್ತು ರಾಬಿನ್ ರೋಷನ್ (27) ಎಂಬುವರೇ ಈ ಕೃತ್ಯ ಎಸಗಿರುವ ಆರೋಪಿಗಳಾಗಿದ್ದು, ಇಬ್ಬರ ವಿರುದ್ಧ ಕೇರಳ ಹೆಲ್ತ್‌ ಕೇರ್ ಸರ್ವಿಸ್ ಪರ್ಸನ್ ಮತ್ತು ಹೆಲ್ತ್‌ಕೇ‌ ಸೇವಾ ಸಂಸ್ಥೆಗಳ (ಹಿಂಸಾಚಾರ ಮತ್ತು ಆಸ್ತಿ ಹಾನಿ ತಡೆ) ಕಾಯ್ದೆ ಮತ್ತು ಐಪಿಸಿ 332 ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

                                    ಘಟನೆ ಹಿನ್ನೆಲೆ:
                  ಶನಿವಾರದಂದು ಆರೋಪಿಗಳು ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಎರ್ನಾಕುಲಂನ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಮಹಿಳಾ ವೈದ್ಯೆ ಹಾಗೂ ಆತನ ಸ್ನೇಹಿತ ಡಾ. ಹರೀಶ್ ಮೊಹಮ್ಮದ್(25)​​ ರೋಗಿಗೆ ಚಿಕಿತ್ಸೆ ನೀಡಿ ಅಲ್ಲಿಂದ ಹೊರ ನಡೆದು ಕೆಫೆಟೇರಿಯಾಗೆ ಹೋಗಿದ್ದಾರೆ.
                 ಈ ವೇಳೆ ವೈದ್ಯರನ್ನು ಹಿಂಬಾಲಿಸಿದ ಆರೋಪಿಗಳು ಅವರು ಕುಳಿತಲ್ಲಿಯೇ ಹೋಗಿ, ಮಹಿಳಾ ವೈದ್ಯೆಯ ಮೇಲೆ ಬೀಳುವಂತೆ ನಟಿಸಿ ಕ್ಷಮಿಸುವಂತೆ ಕೇಳುವಂತೆ ಹೇಳಿದ್ದಾರೆ. ಈ ವೇಳೆ ಹರೀಶ್​ ಅವರಿಬ್ಬರಿಗೂ ಇದರ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ವಾಗ್ವಾದಕ್ಕಿಳಿದು ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿ ಹಲ್ಲೆ ನಡೆಸಿದ್ದಾರೆ.
                 ಈ ಕುರಿತು ಮಾತನಾಡಿದ ಹರೀಶ್​​, ಆರೋಪಿಗಳ ವರ್ತನೆ ಬಗ್ಗೆ ನಾನು ಪ್ರಶ್ನಿಸಿದಾಗ ಅವರು ನನ್ನ ಜತೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ್ದಾರೆ. ಅವರು ನನ್ನ ಮೇಲೆ ದಾಳಿ ಮಾಡುತ್ತಾರೆಂದು ಊಹಿಸಿರಲಿಲ್ಲ. ನನ್ನ ಮೇಲೆ ಹಲ್ಲೆ ನಡೆಸುವ ವೇಳೆ ಒಬ್ಬನ ಮೊಬೈಲ್​ ಫೋನ್​ ಕೆಳಗೆ ಬಿದ್ದಿದ್ದು, ಅದನ್ನು ಪೋಲಿಸರಿಗೆ ಹಸ್ತಾಂತರಿಸಿದ್ದೇನೆ ಎಂದು ಹೇಳಿದ್ದಾರೆ.

                                         ಘಟನೆಗೆ ಖಂಡನೆ:
                   ಘಟನೆಯನ್ನು ಖಂಡಿಸಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರೊಂದಿಗೆ ಸಮಾಜ ನಿಲ್ಲಬೇಕು ಎಂದು ಒತ್ತಾಯಿಸಿದರು. ವೈದ್ಯರು ರೋಗಿಗಳಿಗೆ ನಿಸ್ವಾರ್ಥವಾಗಿ ಕರ್ತವ್ಯ ನಿರ್ವಹಿಸುವ ನಿರ್ಭೀತಿಯ ವಾತಾವರಣ ನಿರ್ಮಾಣವಾಗಬೇಕು ಎಂದು ಜಾರ್ಜ್ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries