ನವದೆಹಲಿ: ದೆಹಲಿಯಿಂದ ಪ್ಯಾರಿಸ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಟೈರ್ ಸ್ಫೋಟಗೊಂಡಿಬಹುದು ಎಂಬ ಅನುಮಾನ ಬಂದ ಹಿನ್ನೆಲೆಯಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ರಾಷ್ಟ್ರ ರಾಜಧಾನಿಗೆ ವಾಪಸ್ ಆಗಿದೆ.
ವಿಮಾನ ಟೇಕ್ ಆಫ್ ನಂತರ ರನ್‌ವೇಯಲ್ಲಿ ಟೈಯರ್ ನ ಅವಶೇಷಗಳು ಪತ್ತೆಯಾಗಿವೆ. ಇದನ್ನೂ ಗಮನಿಸಿದ ವಿಮಾನ ನಿಲ್ದಾಣದ ಸಿಬ್ಬಂದಿ ಕೂಡಲೇ ಎಟಿಸಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಮಾನದ ಪೈಲಟ್ ಗೆ ವಾಪಸ್ ಮರಳುವಂತೆ ಸೂಚನೆ ನೀಡಲಾಗಿದೆ.
ದೆಹಲಿ ವಿಮಾನ ನಿಲ್ದಾಣಕ್ಕೆ ವಾಪಸ್ ಆದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
"28 ಜುಲೈ 2023 ರಂದು ದೆಹಲಿ-ಪ್ಯಾರಿಸ್ ನಡುವೆ ಕಾರ್ಯನಿರ್ವಹಿಸುವ AI143 ವಿಮಾನವು ಟೇಕ್-ಆಫ್ ಆದ ಸ್ವಲ್ಪ ಸಮಯದ ನಂತರ ವಾಪಸ್ ಆಗಿದೆ. ನಿರ್ಗಮನದ ನಂತರ ರನ್‌ವೇಯಲ್ಲಿ ಶಂಕಿತ ಟೈಯರ್ ಭಾಗಗಳ ಬಗ್ಗೆ ವಿಮಾನ ಸಿಬ್ಬಂದಿಗೆ ದೆಹಲಿ ATC ನೀಡಿದ ಮಾಹಿತಿಯನ್ನು ಅನುಸರಿಸಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ" ಏರ್ ಇಂಡಿಯಾ ಹೇಳಿದೆ.