ಬದಿಯಡ್ಕ: ಪ್ರಸಿದ್ಧ ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ, ಜನಪರ ವೈದ್ಯೆಯಾಗಿದ್ದ ಡಾ. ಮಾಲಿನಿ ಸರಳಾಯ ಸಂಸ್ಮರಣೆ ಬದಿಯಡ್ಕ ಶ್ರೀನಿಧಿ ಕ್ಲಿನಿಕ್ ಬುಧವಾರ ನಡೆಯಿತು.
ಕಾಸರಗೋಡಿನ ಇಕೆ ನಾಯನಾರ್ ಆಸ್ಪತ್ರೆಯಲ್ಲಿ ವೃತ್ತಿಯಲ್ಲಿದ್ದ ಅವರು 2009 ಜುಲೈ 26ರಂದು ಅವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದರು. ವೈದ್ಯಕೀಯ ವೃತ್ತಿಯನ್ನು ಸೇವಾ ಮನೋಭಾವದೊಂದಿಗೆ ನಡೆಸಿಕೊಂಡು ಬರುತ್ತಿದ್ದರು. ಅವರ ಅಭಿಮಾನಿಗಳು, ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ. ಶ್ರೀನಿಧಿ ಸರಳಾಯ ಪುಷ್ಪನಮನ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.