ಕಾಸರಗೋಡು: ಮಾಧ್ಯಮ ರಂಗದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯು ಇತರ ಯಾವುದೇ ಕ್ಷೇತ್ರಗಳಿಗಿಂತ ಹೆಚ್ಚಿನ ಸಾಧ್ಯತೆಗಳನ್ನು ಸೃಷ್ಟಿಸುತ್ತಿದ್ದು, ಈ ಬಗ್ಗೆ ಪತ್ರಕರ್ತರು ಮತ್ತಷ್ಟುಪ್ರಜ್ಞಾವಂತರಾಗಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್ ಕ್ಲಬ್ ಮತ್ತು ಕೆ.ಎಂಅಹ್ಮದ್ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಹಾಗೂ ಸಂಯುಕ್ತಾ ಮಾ.17ರಂದು ಜಂಟಿಯಾಗಿ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮ ಚಟುವಟಿಕೆ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಪತ್ರಕರ್ತರು ಎಂದಿಗೂ ನೈತಿಕತೆ ಮರೆಯಬಾರದು. ಕೃತಕ ಬುದ್ಧಿಮತ್ತೆಯ ಸುಧಾರಣೆ ಮಾಧ್ಯಮ ರಂಗದಲ್ಲೂ ಪ್ರಭಾವಶಾಲಿಯಾಗಿ ಬೆಳೆಯುತ್ತಿದ್ದು, ಇದರ ದಉರ್ಬಳಕೆಯಗದಂತೆ ನೋಡಿಕೊಳ್ಳುವ ಜವಬ್ದಾರಿ ಪತ್ರಕರ್ತರ ಮೇಲಿದೆ ಎಂದು ತಿಳಿಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಮ್ ಅಧ್ಯಕ್ಷತೆ ವಹಿಸಿದ್ದರು. ಮತ್ಯಭೂಮಿ ಆನ್ ಲೈನ್ ಕನ್ಸಲ್ಟೆಂಟ್ ಸುನೀಲ್ ಪ್ರಭಾಕರ್ ಕೃತಕ ಬುದ್ಧಿಮತ್ತೆ ಮಾಧ್ಯಮ ರಂಗದಲ್ಲಿನ ಆವಿಷ್ಕಾರಗಳ ಬಗ್ಗೆ ತರಗತಿ ನಡೆಸಿದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಕೆ.ವಿ.ಪದ್ಮೇಶ್ ಸ್ವಾಗತಿಸಿದರು. ಮಾಧ್ಯಮ ಹಣಕಾಸು ಸಂಶೋಧನಾ ಕೇಂದ್ರದ ನಿರ್ದೇಶಕ ಸನ್ನಿ ಜೋಸೆಫ್ ವಂದಿಸಿದರು.