HEALTH TIPS

ಬದರಿನಾಥ, ಕೇದಾರನಾಥ, ಅಯ್ಯಪ್ಪ ದೇಗುಲ ಬೌದ್ಧ ವಿಹಾರಗಳಾಗಿದ್ದವು: ಎಸ್‌ಪಿ ಮುಖಂಡ

                ಖನೌ: ವಾರಾಣಸಿ ಮತ್ತು ಮಥುರಾದಲ್ಲಿ ಮಸೀದಿಗಳಲ್ಲಿ ದೇಗುಲಗಳ ಕುರುಹು ಪತ್ತೆ ಕುರಿತಾದ ವಿವಾದಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು, ಬಿಜೆಪಿಯು ಪ್ರತಿ ಮಸೀದಿಯಲ್ಲಿ ದೇವಾಲಯವನ್ನು ಹುಡುಕಿದರೆ, ಜನರು ಪ್ರತಿ ದೇವಾಲಯದಲ್ಲಿ ಬೌದ್ಧ ವಿಹಾರವನ್ನು ಹುಡುಕಲು ಪ್ರಾರಂಭಿಸುತ್ತಾರೆ ಎಂದು ಹೇಳಿದ್ದಾರೆ.

            'ಬಿಜೆಪಿಯವರು ಮಸೀದಿ-ಮಂದಿರದ ವಿಚಾರ ಎತ್ತುವ ಮೂಲಕ ಷಡ್ಯಂತ್ರ ಹೂಡುತ್ತಿದ್ದಾರೆ. ಅವರು ಪ್ರತಿ ಮಸೀದಿಯಲ್ಲಿ ದೇವಾಲಯವನ್ನು ಹುಡುಕುತ್ತಿದ್ದಾರೆ. ಇದಕ್ಕೆ ಅವರು ದುಬಾರಿ ಬೆಲೆ ತೆರಬೇಕಾಗುತ್ತದೆ 'ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

             ಹಲವು ದೇವಾಲಯಗಳು ಹಿಂದೆ ಬೌದ್ಧ ವಿಹಾರಗಳಾಗಿದ್ದವು ಎಂಬುದಕ್ಕೆ ಸಾಕಷ್ಟು ಐತಿಹಾಸಿಕ ಪುರಾವೆಗಳಿವೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.

              'ಉತ್ತರಾಖಂಡದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳು, ಪುರಿಯ ಜಗನ್ನಾಥ ದೇವಾಲಯ, ಕೇರಳದ ಅಯ್ಯಪ್ಪ ದೇವಾಲಯ ಮತ್ತು ಪಂಢರಪುರದ (ಮಹಾರಾಷ್ಟ್ರ) ವಿಠ್ಠಲ ದೇವಾಲಯಗಳು ಬೌದ್ಧ ವಿಹಾರಗಳಾಗಿದ್ದವು. ಈ ಬೌದ್ಧ ವಿಹಾರಗಳನ್ನು ಕೆಡವಿ, ದೇವಾಲಯಗಳನ್ನು ಕಟ್ಟಲಾಗಿದೆ. ಎಂಟನೇ ಶತಮಾನದವರೆಗೂ ಅವುಗಳು ಬೌದ್ಧ ವಿಹಾರಗಳಾಗಿದ್ದವು'ಎಂದು ಅವರು ಹೇಳಿದ್ದಾರೆ.

               ಈ ದೇವಾಲಯಗಳನ್ನು ಮತ್ತೆ ಬೌದ್ಧ ವಿಹಾರಗಳಾಗಿ ಪರಿವರ್ತಿಸುವುದು ನಮ್ಮ ಉದ್ದೇಶವಲ್ಲ. ಆದರೆ, ನೀವು ಪ್ರತಿ ಮಸೀದಿಯಲ್ಲಿ ದೇವಾಲಯವನ್ನು ಹುಡುಕಿದರೆ, ಪ್ರತಿ ದೇವಾಲಯದಲ್ಲಿ ಬೌದ್ಧ ವಿಹಾರವನ್ನು ಏಕೆ ಹುಡುಕಬಾರದು? ಎಂದು ಅವರು ಪ್ರಶ್ನಿಸಿದ್ದಾರೆ.

                ಮೌರ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ, 'ಸನಾತನ ಧರ್ಮವನ್ನು ಮತ್ತೆ ಮತ್ತೆ ಅವಮಾನಿಸುವುದು ಸಮಾಜವಾದಿ ಪಕ್ಷ ಮತ್ತು ಅದರ ನಾಯಕರ ಅಭ್ಯಾಸವಾಗಿದೆ'ಎಂದು ಕಿಡಿ ಕಾರಿದ್ದಾರೆ.

                ಹಿಂದೂಗಳ ಧಾರ್ಮಿಕ ನಂಬಿಕೆಯ ಪ್ರಮುಖ ಕೇಂದ್ರಗಳಾದ ಕೇದಾರನಾಥ, ಬದರಿನಾಥ ಮತ್ತು ಪುರಿ ಬಗ್ಗೆ ಮೌರ್ಯ ಅವರ ಹೇಳಿಕೆಗಳು ವಿವಾದಾತ್ಮಕ ಮಾತ್ರವಲ್ಲದೆ, ಅವರ ಕ್ಷುಲ್ಲಕ ಮನಸ್ಥಿತಿ ಮತ್ತು ರಾಜಕೀಯಕ್ಕೆ ಸಾಕ್ಷಿ ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries