ಲಂಡನ್ (PTI): ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಕೇರಳದ ಸಾಜು ಚೇಲವಾಲನ್ (52) ಎಂಬಾತನಿಗೆ ಬ್ರಿಟನ್‌ನ ನಾರ್ಥಾಂಪ್ಟನ್‌ಶೈರ್‌ನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಲಂಡನ್ (PTI): ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಕೇರಳದ ಸಾಜು ಚೇಲವಾಲನ್ (52) ಎಂಬಾತನಿಗೆ ಬ್ರಿಟನ್‌ನ ನಾರ್ಥಾಂಪ್ಟನ್‌ಶೈರ್‌ನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಸಾಜು ಕನಿಷ್ಠ 40 ವರ್ಷ ಸೆರೆವಾಸ ಅನುಭವಿಸಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.
2022 ಡಿಸೆಂಬರ್ 15 ರಂದು ಪತ್ನಿ ಅಂಜು ಅಶೋಕ್ (35), ಮಕ್ಕಳಾದ ಜೀವಾ ಸಾಜು (6), ಜಾನ್ವಿ ಸಾಜು (4) ಎಂಬುವವರನ್ನು ಸಾಜು ಕೊಲೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ. ಅಂಜು ಅವರು ಕೆಟ್ಟಿರಿಂಗ್‌ನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದರು.
ಮೂವರನ್ನೂ ಉಸಿರುಗಟ್ಟಿಸಿ ಕೊಲ್ಲಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರು.
ಅಂಜು ಅವರ ಸಾವಿನ ಸಂದರ್ಭದಲ್ಲಿ ದಾಖಲಾಗಿದ್ದ ಆಡಿಯೊವನ್ನು ನ್ಯಾಯಾಧೀಶ ಎಡ್ವರ್ಡ್ ಪೆಪ್ಪರಾಲ್ ಅವರು ಉಲ್ಲೇಖಿಸಿದ್ದು, ಇದು ಅಪರಾಧಿಗೆ ಶಿಕ್ಷೆ ವಿಧಿಸುವಲ್ಲಿ ಮಹತ್ವದ ಸಾಕ್ಷ್ಯವಾಗಿತ್ತು ಎಂದು ಮೂಲಗಳು ತಿಳಿಸಿವೆ.