ಕಾಸರಗೋಡು: ಕಾಞಂಗಾಡು ನಗರಸಭೆ ಕುಟುಂಬಶ್ರೀ ಸಿಡಿಎಸ್ ಎರಡನೇ ಹಲಸಿನ ಹಬ್ಬ ನಗರಸಭಾ ಪುರಭವನದಲ್ಲಿ ನಡೆಯಿತು. ಮೇಳದಲ್ಲಿ ಕುಟುಂಬಶ್ರೀ ಸದಸ್ಯರು ಹಲಸಿನ ಹಣ್ಣಿನ ರಸ, ಸ್ಟ್ಯೂ, ಕಟ್‍ಲೈಟ್, ರೋಲ್, ವಡಾ ಸೇರಿದಂತೆ ಸುಮಾರು 50 ಸಾಮಾಗ್ರಿಗಳನ್ನು ಪ್ರದರ್ಶಿಸಲಾಯಿತು.
ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಅಹ್ಮದ್ ಅಲಿ ಅಧ್ಯಕ್ಷತೆ ವಹಿಸಿದ್ದರು.
ಕುಟುಂಬಶ್ರೀ ಸದಸ್ಯ ಕಾರ್ಯದರ್ಶಿ ಜಯಚಂದ್ರ ಮೋನಾಚಾ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಿಶ್, ನಗರಸಭಾ ಸದಸ್ಯ ಟಿ.ಬಾಬು, ಸಿಡಿಎಸ್ ಅಧ್ಯಕ್ಷೆ ಸೂರ್ಯಜಾನಕಿ ಮಾತನಾಡಿದರು.
ಸಿಡಿಎಸ್ ಅಧ್ಯಕ್ಷೆ ಕೆ.ಸುಜಿನಿ ಸ್ವಾಗತಿಸಿ, ಉಪಾಧ್ಯಕ್ಷೆ ಪಿ.ಶಶಿಕಲಾ ವಂದಿಸಿದರು.