ಕುಂಬಳೆ: ಪೆರ್ನಾಲ್ ಹಬ್ಬ ಆಚರಿಸಲೆಂದು ಅಜ್ಜನ ಮನೆಗೆ ಬಂದಿದ್ದ ಯುವಕರಿಬ್ಬರು ಮಸೀದಿಯ ಸಮೀಪದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೊಗ್ರಾಲ್ ಕೊಪ್ಪಳದಲ್ಲಿ ಶನಿವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಮಂಜೇಶ್ವರ ಮಜಿಬೈಲ್ ನಿವಾಸಿ ಖಾದರ್ - ನಸೀಮಾ ದಂಪತಿಗಳ ಮಕ್ಕಳಾದ ಅಬ್ದುಲ್ ನಾಝಿಂ (22) ಹಾಗೂ ಮೊಹಮ್ಮದ್ ನವಾ (17) ಮೃತ ದುರ್ದೈವಿಗಳು.
ಮಾಹಿತಿ ಪಡೆದ ಕುಂಬಳೆ ಪೋಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ಸ್ಥಳಕ್ಕಾಗಮಿಸಿದ ಸ್ಥಳೀಯರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಆಸ್ಪತ್ರೆಗೆ ತಲುಪಿಸಿದ್ದಾರೆ.