ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ "ವರ್ಷ ಋತು ಸಂಭ್ರಮ" ಕಾರ್ಯಕ್ರಮ ಪೆರ್ಲ ಬಯಲಿನಲ್ಲಿ ಯಶಸ್ವಿಯಾಗಿ ಜರಗಿತು.ಈ ಬಗ್ಗೆ ಎಣ್ಮಕಜೆ ಗ್ರಾಮ ಪಂಚಾಯತ್ ಪರಿಸರದಿಂದ ಹೊರಟ ಮೆರವಣಿಗೆಯನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಅಧ್ಯಕ್ಷತೆವಹಿಸಿದ್ದರು.
ಗ್ರಾ.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯೆ ಇಂದಿರಾ, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ, ಕುಟುಂಬಶ್ರೀ ಮೆಂಟರ್ ಭವ್ಯ, ಫಾಸರುನ್ನಿಸ, ಕೌನ್ಸಿಲರ್ ಪ್ರಸೀದಾ, ಎಸ್.ಟಿ ಎನ್ಯುಮೇಟರ್ ವನಜಾ, ಗೀತಾ, ಅಕೌಂಟೆಂಟ್ ಸುನೀತಾ, ಬಾಲಸಭಾ ಆರ್.ಪಿ. ಉದಯಕುಮಾರಿ, ಸಿಡಿಎಸ್ ಹಾಗೂ ಕುಟುಂಬಶ್ರೀ, ಬಾಲಸಭಾ ಸದಸ್ಯರು, ಹಸಿರು ಕ್ರಿಯಾ ಸೇನಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪೆರ್ಲ ಬಯಲಿನ ಗದ್ದೆಯಲ್ಲಿ ನೇಜಿ ನೇಡುವ ಮೂಲಕ ಚಾಲನೆ ನೀಡಿದ ಕಾರ್ಯಕ್ರಮ ಗದ್ದೆಯಲ್ಲಿ ಕುಟುಂಬಶ್ರೀ ಸದಸ್ಯೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಹಾಗೂ ಮಧ್ಯಾಹ್ನ ಕರ್ಕಟಕ ಮಾಸದ ವಿಶೇಷ ಗಂಜಿಯನ್ನು ಏರ್ಪಡಿಸಲಾಗಿತ್ತು.