ತಿರುವನಂತಪುರಂ: ತಿರುವನಂತಪುರಂನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ (ಐಎಕ್ಸ್ 539) ಸಮಸ್ಯೆಯ ಕಾರಣ ಮರಳಿ ಹಿಂದಿರುಗಿದೆ.
ನಿನ್ನೆ ಮಧ್ಯಾಹ್ನ 1:19ಕ್ಕೆ ಟೇಕಾಫ್ ಆದ ವಿಮಾನದಲ್ಲಿ ಎಸಿ ದೋಷ ಪತ್ತೆಯಾದ ನಂತರ 3:52ಕ್ಕೆ ಸುರಕ್ಷಿತವಾಗಿ ವಾಪಸ್ ತರಲಾಯಿತು. ಭದ್ರತಾ ಕ್ರಮಗಳ ಭಾಗವಾಗಿ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಸ್ಟ್ಯಾಂಡ್‍ಬೈ ಘೋಷಿಸಲಾಗಿತ್ತು. ವಿಮಾನದಲ್ಲಿ 174 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು. ಅವರನ್ನು ಸಂಜೆ 6.12ಕ್ಕೆ ಮತ್ತೊಂದು ವಿಮಾನದಲ್ಲಿ (ಐಎಕ್ಸ್ 556) ದುಬೈಗೆ ಕರೆದೊಯ್ಯಲಾಯಿತು.