ಮಂಜೇಶ್ವರ: ಆರೋಗ್ಯ ಕೇರಳ ಕಾಸರಗೋಡು ಇದರ ಅಂಗವಾಗಿ ತಾಲೂಕು ಆಸ್ಪತ್ರೆ ಮಂಗಲ್ಪಾಡಿ ನೇತೃತ್ವದಲ್ಲಿ ಆರೋಗ್ಯ ಸಂಬಂಧಿ ಕೌಮಾರ್ಯ ಸೌಹಾರ್ದ ಕಾರ್ಯಕ್ರಮ ಮಂಜೇಶ್ವರ ಎಸ್.ಎ.ಟಿ. ಪ್ರೌಢಶಾಲೆಯಲ್ಲಿ ಜರುಗಿತು. ತಾಲೂಕು ವೈದ್ಯಾಧಿಕಾರಿ ಡಾ. ಪ್ರಭಾಕರ್ ರೈ ಅವರು ಆಹಾರ ಪದ್ಧತಿಯ ವ್ಯತ್ಯಾಸದಿಂದ ಉಂಟಾಗುವ ರೋಗಗಳ ಬಗ್ಗೆ ಮತ್ತು ಆರೋಗ್ಯ ಪಾಲನೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುರೇಖಾ ಮಲ್ಯ ಉಪಸ್ಥಿತರಿದ್ದರು. ಆರೋಗ್ಯಾಧಿಕಾರಿ ಪ್ರಮೀಣ್ ಟಿ. ಎಸ್., ಅವಿತಾ ವಿ. ಮತ್ತು ಆಶಾ ಕಾರ್ಯಕರ್ತೆ ನಳಿನಿ ಉಪಸ್ಥಿತರಿದ್ದರು.