ಸಾಮಾನ್ಯವಾಗಿ ಮಕ್ಕಳು ರಜಾ ಇದ್ರೆ ಮನೆಯಲ್ಲಿ ಫ್ರೀಯಾಗಿಯೇ ಇರ್ತಾರೆ. ನಾವು ಚಿಕ್ಕವರಿದ್ದಾಗ ರಜಾ ದಿನಗಳಲ್ಲಿ ಮನೆಯಿಂದ ಹೊರಗಡೆ ಹೋಗಿ ಸ್ನೇಹಿತರ ಜೊತೆಗೆ ಆಟ ಆಡುತ್ತಿದ್ದೆವು. ಆದ್ರೆ ಈಗಿನ ಮಕ್ಕಳು ಹಾಗಲ್ಲ. ಮೊಬೈಲ್ ಹಾಗೂ ಐಪಾಡ್ ಹಿಡ್ಕೊಂಡು ಕುತ್ಕೊತ್ತಾರೆ. ಇಲ್ಲ ಅಂದ್ರೆ ಮೂರು ಹೊತ್ತು ಟಿವಿ ನೋಡ್ತಾರೆ. ಪೋಷಕರಿಗೂ ಮಕ್ಕಳು ಸುಮ್ಮನೆ ಕುಳಿತುಕೊಳ್ಳೋದೇ ಬೇಕಾಗಿರುತ್ತೆ. ಹೀಗಾಗಿ ಮನೆಯಲ್ಲಿ ಟಿವಿ ಹಾಕಿ ಸುಮ್ಮನಿರ್ತಾರೆ.
ಪೋಷಕರೇ ಈ ರೀತಿ ಮಾಡುವುದು ತಪ್ಪು. ಟಿವಿ, ಮೊಬೈಲ್ ನಲ್ಲಿದ್ರೆ ಮಕ್ಕಳ ಮೈಂಡ್ ನಿಂತು ಹೋಗುತ್ತೆ. ಬೇರೇನನ್ನೂ ಯೋಚಿಸೋದಿಲ್ಲ. ಇದರ ಬದಲಾಗಿ ಅವರನ್ನು ಬ್ಯುಸಿಯಾಗಿ ಇಡೋದಕ್ಕೆ ಅನೇಕ ಚಟುವಟಿಕೆಗಳನ್ನು ನೀವು ಮಾಡಿಸ್ಬಹುದು. ಆಗ ಅವರ ಕೌಶಲ್ಯ ಹಾಗೂ ಯೋಚನಾ ಸಾಮರ್ಥ್ಯ ಹೆಚ್ಚಾಗುತ್ತದೆ. ಅಷ್ಟಕ್ಕು ಮಕ್ಕಳ ಫ್ರೀ ಟೈಂ ನಲ್ಲಿ ಅವರನ್ನು ಬ್ಯುಸಿಯಾಗಿ ಇಡೋದಕ್ಕೆ ಏನು ಮಾಡ್ಬೇಕು ಅನ್ನೋದನ್ನು ತಿಳಿಯೋಣ.1. ಪುಸ್ತಕ ಓದುವ ಹವ್ಯಾಸ ಬೆಳೆಸಿ ಪುಸ್ತಕ ಓದುವ ಹವ್ಯಾಸ ತುಂಬಾನೇ ಒಳ್ಳೆಯದು. ಪುಸ್ತಕವು ಒರ್ವ ವ್ಯಕ್ತಿಯನ್ನು ಸದೃಢ ವ್ಯಕ್ತಿಯನ್ನಾಗಿ ಮಾಡೋದಕ್ಕೆ ಸಹಕರಿಸುತ್ತದೆ. ಅದ್ರಲ್ಲೂ ಚಿಕ್ಕ ವಯಸ್ಸಿನಲ್ಲಿಯೇ ಪುಸ್ತಕದ ಗೀಳು ಹತ್ತಿಕೊಂಡರೆ ಮುಂದೆ ಅವರ ಭವಿಷ್ಯಕ್ಕೆ ತುಂಬಾನೇ ಉಪಯೋಗವಾಗುತ್ತದೆ. ಹೀಗಾಗಿ ಮಕ್ಕಳು ಚಿಕ್ಕವರಿರಬೇಕಾದರೆ ಅವರಿಗೆ ಕಥೆ ಪುಸ್ತಕಗಳನ್ನು ತಂದುಕೊಡಿ. ಹುಟ್ಟುಹಬ್ಬಕ್ಕೆ ಪುಸ್ತಕಗಳನ್ನೇ ಉಡುಗೊರೆಯನ್ನಾಗಿ ನೀಡಿ. ಫ್ರೀಯಾಗಿ ಇರೋ ಸಮಯದಲ್ಲಿ ಪುಸ್ತಕ ಓದೋದಕ್ಕೆ ಹೇಳಿ.
4. ಮೆದುಳನ್ನು ಚುರುಕಾಗಿರಿಸಿ
ಮಕ್ಕಳ ಮೆದುಳು ಆಕ್ಟೀವ್ ಆಗಿ ಇರಬೇಕಂದ್ರೆ ಅವರ ಮೆದುಳು ಚುರುಕಾಗಲು ಕೆಲವೊಂದು ಆಕ್ಟಿವಿಟಿಗಳನ್ನು ನೋಡಿಕೊಳ್ಳಿ. ಮೆದುಳಿನ ವ್ಯಾಯಾಮ ಮಾಡಿಸೋದ್ರಿಂದ ಅರ ಮೆದುಳು ತೀಕ್ಷ್ಮವಾಗಿ ಬೆಳೆಯೋದಕ್ಕೆ ಸಹಾಯ ಮಾಡುತ್ತದೆ. ಸುಡೋಕು, ಪದಬಂಧ, ಪಜಲ್ ಬಿಡಿಸುವುದು, ಗಣಿತದ ಲೆಕ್ಕಗಳನ್ನು ಬಿಡಿಸುವುದು ಈ ರೀತಿಯ ಆಕ್ಟಿವಿಟಿಗಳನ್ನು ಅವರ ಕೈಯಿಂದ ಮಾಡಿಸಿ. ಇದರಿಂದ ನಿಮ್ಮ ಮಗುವಿನ ವಿಮರ್ಶಾತ್ಮಕ ಚಿಂತನೆ, ತಾರ್ಕಿಕ ಕೌಶಲ್ಯ ಮತ್ತು ತಾರ್ಕಿಕ ಚಿಂತನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
5. ನೃತ್ಯ ಮತ್ತು ಹಾಡು ಹಾಡಿಸಿ
ಮಕ್ಕಳಿಗೆ ಯಾವಾಗಲೂ ಒಂದೇ ರೀತಿಯ ಆಕ್ಟಿವಿಟಿಗಳನ್ನು ಮಾಡೋದ್ರಿಂದ ಬೇಜಾರಾಗಬಹುದು. ಹೀಗಾಗಿ ಸಮಯ ಸಿಕ್ಕಾಗ ಮಕ್ಕಳ ಜೊತೆಗೆ ಸೇರಿ ಪೋಷಕರು ಕೂಡ ನೃತ್ಯ ಮಾಡಬೇಕು. ಆಗ ಮಕ್ಕಳ ಎಂಜಾಯ್ ಮಾಡ್ಕೊಂಡು ಡಾನ್ಸ್ ಮಾಡ್ತಾರೆ. ಇನ್ನೂ ಇದರ ಜೊತೆಗೆ ಹಾಡು ಕೂಡ ಹಾಡಿಸಬಹುದು. ಕೆಲವು ಮಕ್ಕಳಿಗೆ ಹಾಡು ಹಾಡೋದಕ್ಕೆ ತುಂಬಾನೇ ಆಸಕ್ತಿ ಇರುತ್ತದೆ. ಅವರಿಗೆ ಇಷ್ಟವಾಗೋ ಹಾಡುಗಳನ್ನೇ ಹಾಡಿಸಿ.
6. ಹೊಸ ಅನ್ವೇಷನೆಗಳನ್ನು ಮಾಡಲಿ ಮಕ್ಕಳು ಯಾವುದಾದರೂ ಕೆಲಸವನ್ನು ಮಾಡುತ್ತೇನೆ ಎಂದು ಆಸಕ್ತಿ ತೋರಿದಾಗ ಪೋಷಕರಾಗಿ ನೀವು ಬೇಡ ಎಂದು ಹೇಳಬಾರದು. ಬದಲಾಗಿ ನೀವು ಅವರ ಆಸಕ್ತಿಗೆ ಪ್ರೋತ್ಸಾಹವನ್ನು ನೀಡಬೇಕು. ಸಾಧ್ಯವಾದರೆ ವಿಜ್ಞಾನದ ಅನ್ವೇಷಣೆಗೆ ಸಂಬಂಧಪಟ್ಟ ವಸ್ತುಗಳನ್ನು ಅವರಿಗೆ ತಂದುಕೊಡಿ. ಇದರಿಂದ ಅವರು ಹೊಸ ಹೊಸ ವಿಚಾರ ಕಲಿಯೋದಕ್ಕೂ ಸಾಧ್ಯವಾಗುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಏನೆಲ್ಲಾ ಸಾಧ್ಯ ಇದೆಯೋ ಅದನ್ನೆಲ್ಲಾ ಮಾಡಬೇಕು. ಆದಷ್ಟು ಈ ಗೆಜೆಟ್ ಗಳಿಂದ ಮಕ್ಕಳನ್ನು ದೂರವಿಟ್ಟು ಈ ರೀತಿಯ ಚಟುವಟಿಕೆಗಳನ್ನು ಮಕ್ಕಳ ಕೈಯಿಂದ ಮಾಡಿಸಿ.